ಪದ್ಮುಂಜ: ಖಲಂದರ್ ಷಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದ್ ಮಿಲಾದ್ ಕಾರ್ಯಕ್ರಮ ಜಮಾಅತ್ ಅಧ್ಯಕ್ಷ ರಫೀಕ್ ರವರ ಅಧ್ಯಕ್ಷತೆಯಲ್ಲಿ ಸೆ. 5ರಂದು ಜರಗಿತು. ಪದ್ಮುಂಜ ಮಸೀದಿಯಿಂದ ಪದ್ಮುಂಜ ಪೇಟೆಯವರೆಗೆ ಸ್ವಲಾತ್ ಮೆರವಣಿಗೆ ನಡೆಯಿತು. ತದನಂತರ ನಡೆದ ಸಭಾ ಕಾರ್ಯಕ್ರಮವನ್ನು ಜಮಾಅತ್ ಕಾರ್ಯದರ್ಶಿ ಕಾಸಿಂ ಪದ್ಮುಂಜ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕಣಿಯೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸೀತಾರಾಮ ಮಡಿವಾಳ ಅವರು ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸುವುದರ ಮುಖಾಂತರ ಶಾಂತಿ ಸೌಹಾರ್ದತೆಯನ್ನು ಕಾಪಾಡೋಣ ಎಂದರು. ಅಣ್ಮು ಸಾಧನ, ರಮಾನಂದ ಪೂಜಾರಿ, ಸತೀಶ್ ರಾವ್ ಮಲೆಂಗಲ್ಲು, ದಿನೇಶ್ ಶೆಟ್ಟಿ ಮಲೆಂಗಲ್ಲು, ಝೋನ್ ನಾಯಕರಾದ ಮುಹಮ್ಮದ್ ಖಲಂದರ್ ಪದ್ಮುಂಜ, ನಿಜಾಮುದ್ದೀನ್ ನನ್ಯ, ಎಸ್.ಎಸ್.ಎಫ್. ಅಧ್ಯಕ್ಷ ನಾಸಿರ್ ಮಲೆಂಗಲ್ಲು, ಕಾರ್ಯದರ್ಶಿ ಅಸ್ಫಖ್ ನನ್ಯ ಖತೀಬ್ ಉಸ್ತಾದ್ ಹುಸೈನ್ ಸುಲ್ತಾನಿ ಸಅದಿ, ಸಹ ಅಧ್ಯಾಪಕ ಮುಹಮ್ಮದ್ ಸಫ್ವಾನ್ ಹಿಕಮಿ ಜ, ಕೋಶಾಧಿಕಾರಿ ಯುಸುಫ್ ಹಾಜಿ, ಎಸ್.ವೈ.ಎಸ್ ಅಧ್ಯಕ್ಷ ನಝೀರ್ ಮಲೆಂಗಲ್ಲು, ಕಾರ್ಯದರ್ಶಿ ತೌಸೀಫ್, ಕೆ.ಎಂ.ಜೆ ಕೋಶಾಧಿಕಾರಿ ಸಮದ್ ನನ್ಯ ಸೇರಿದಂತೆ ಸಂಘ ಸಂಸ್ಥೆಯ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮದರಸ ವಿದ್ಯಾರ್ಥಿಗಳಿಂದ ವಿವಿದ ಸ್ಪರ್ಧೆಗಳು ನಡೆದು ಬಹುಮಾನ ವಿತರಣೆ ನಡೆಸಲಾಯಿತು. ಅಬ್ದುಲ್ ನಾಫಿ ಹಾಸಿಮಿ ಸ್ವಾಗತ ಮಾಡಿದರು. ಅಬ್ದುಲ್ ರಹ್ಮಾನ್ ಪದ್ಮುಂಜ ಧನ್ಯವಾದ ಸಲ್ಲಿಸಿದರು.