ಬೆಳ್ತಂಗಡಿ: ಕರಾಯ ತ್ರಿವರ್ಣ ಸಂಗಮ ಆಟೋ ಚಾಲಕ ಮಾಲಕ ಸಂಘದ ವಾರ್ಷಿಕ ಮಹಾಸಭೆಯು ಕರಾಯ ಸಭಾಭವನದಲ್ಲಿ ಜರುಗಿತು. ಗೌರವಾಧ್ಯಕ್ಷ ವಿಲಿಯಂ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ
2025-26ನೇ ಸಾಲಿನ ನೂತನ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ವೆಂಕಟೇಶ್ ಪೂಜಾರಿ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ನವೀನ, ಕಾರ್ಯದರ್ಶಿಯಾಗಿ ಟೋನಿ, ಜೊತೆ ಕಾರ್ಯದರ್ಶಿಯಾಗಿ ಅನ್ವರ್, ಕಾಜಾಂಜಿಯಾಗಿ ಹರೀಶ ಅವರನ್ನು ಆರಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿದ್ದೀಕ್, ರಫೀಕ್, ರತನ್, ನಝೀರ್, ಅಬ್ದುಲ್ಲ ಮತ್ತು ಸಂತೋಷ್ ಕುಮಾರ್, ಗೌರವ ಸಲಹೆಗಾರರಾಗಿ ಇಲ್ಯಾಸ್ ಕರಾಯ, ಕಾನೂನು ಸಲಹೆಗಾರರಾಗಿ ಪ್ರಶಾಂತ್ ಬೆಳ್ತಂಗಡಿ ಅವರು ಆಯ್ಕೆಯಾದರು.