ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಿರುದ್ಯಾವರ ಕಾರ್ಯಕ್ಷೇತ್ರದ ಕುಕ್ಕಾವು ಒಕ್ಕೂಟದ ಭಾಗ್ಯನಿಧಿ ಸಂಘದ ಸದಸ್ಯೆಯಾಗಿದ್ದು, ಪಾರ್ಶ್ವವಾಯು ಪೀಡಿತರಾಗಿರುವ ವಸಂತಿ ಅವರಿಗೆ ಕೊಮೊಡೋ ಇರುವ ಗಾಲಿ ಕುರ್ಚಿಯನ್ನು ಹಸ್ತಾಂತರಿಸಲಾಯಿತು.
ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದನ್ವಯ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ ಈ ಸೌಲಭ್ಯವನ್ನು ಕಡಿರುದ್ಯಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಾವಿತ್ರಿ ಫಲಾನುಭವಿಗೆ ಹಸ್ತಾಂತರಿಸಿದರು.
ಕುಕ್ಕಾವು ಒಕ್ಕೂಟದ ಅಧ್ಯಕ್ಷ ಜಗದೀಶ್ ಕುಂಬಾರ, ಮುಂಡಾಜೆ ವಲಯ ಮೇಲ್ವಿಚಾರಕ ಜನಾರ್ಧನ ಮಾಚಾರು, ಸೇವಾಪ್ರತಿನಿಧಿ ರಶ್ಮಿ ಮತ್ತು ಸಂಘದ ಸದಸ್ಯರು ಹಾಗೂ ಮನೆ ಸದಸ್ಯರು ಉಪಸ್ಥಿತರಿದ್ದರು.