ಗುರುವಾಯನಕೆರೆ: 2024-25ನೇ ಸಾಲಿನಲ್ಲಿ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಆ.31ರಂದು ನಡೆದ ದ.ಕ. ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಸಂಘವು ಈ ವರ್ಷದಲ್ಲಿ ಸಾಧಿಸಿರುವ ಸೇವೆಯನ್ನು ಪರಿಗಣಿಸಿ ಸಾಧನ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷ ಅಜಿತ್.ಜಿ ಶೆಟ್ಟಿಯವರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿಯವರು ಸ್ವೀಕರಿಸಿದರು. ಹಾಗೂ ಉಪಾಧ್ಯಕ್ಷ ಜಯಂತ ಶೆಟ್ಟಿ. ಕೆ, ನಿರ್ದೇಶಕರಾದ ಪುಷ್ಪರಾಜ್ ಶೆಟ್ಟಿ, ರಘುರಾಮ ಶೆಟ್ಟಿ, ಕೃಷ್ಣ ರೈ. ಟಿ., ಜಯರಾಮ ಭಂಡಾರಿ, ವಿಜಯ ಬಿ. ಶೆಟ್ಟಿ ಉಪಸ್ಥಿತರಿದ್ದರು.