
ಹತ್ಯಡ್ಕ: ಪ್ರಾ.ಕೃ.ಪ. ಸ.ಸಂಘಕ್ಕೆ ಡಿಸಿಸಿ ಬ್ಯಾಂಕ್ ವಾರ್ಷಿಕ ಮಹಾ ಸಭೆಯ ಸಂಧರ್ಭದಲ್ಲಿ ಸಂಘದ ವಿಶೇಷ ಸಾಧನೆಗೆ “ವಿಶೇಷ ಪ್ರೋತ್ಸಾಹಕ ಬಹುಮಾನ” ನೀಡಿ ಗೌರವಿಸಿದೆ. ಪ್ರಶಸ್ತಿಯನ್ನು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿಚಂದ್ರ ರಾವ್ ಅಂಗಡಿತೋಟ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ರಾಜು ಸಾಲಿಯಾನ್, ಸಿಬ್ಬಂದಿಗಳಾದ ರಂಜಿತ್ ಶೆಟ್ಟಿ, ಪ್ರಣಮ್ ಯು. ಉಪಸ್ಥಿತರಿದ್ದರು.