ಬೆಳ್ತಂಗಡಿ: ಕಥೊಲಿಕ್ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 325 ಕೋಟಿ ವ್ಯವಹಾರ,ರೂ.1.81 ಕೋಟಿ ಲಾಭ: ಸದಸ್ಯರಿಗೆ ಶೇ. 25%ಡಿವಿಡೆಂಡ್ ಘೋಷಣೆ

0

ಬೆಳ್ತಂಗಡಿ: ಕಥೊಲಿಕ್ ಕ್ರೆಡಿಟ್ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಆ.30ರಂದು ಬೆಳ್ತಂಗಡಿ ಸಿವಿಸಿ ಹಾಲ್ ನಲ್ಲಿ ಜರಗಿತು. ಸಂಘದ ಅಧ್ಯಕ್ಷ ಹೆನ್ರಿ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಸದಸ್ಯರಿಗೆ ಶೇ.25 ಡಿವಿಡೆಂಡ್ ಘೋಷಿಸಿದರು. ಸಂಘವು 2024-25ನೇ ಸಾಲಿನಲ್ಲಿ ರೂ.325ಕೋಟಿ ವ್ಯವಹಾರ ನಡೆಸಿ ರೂ.1.81 ಕೋಟಿ ಲಾಭ ಗಳಿಸಿದೆ. ರೂ.97.95ಕೋಟಿ ಠೇವಣಿ ಸಂಗ್ರಹವಾಗಿದೆ.ಸಂಘದಲ್ಲಿ ಒಟ್ಟು 2697 ಸದಸ್ಯರನ್ನು ಹೊಂದಿದ್ದು ರೂ.92 ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿರುತ್ತದೆ.

ಎಸ್. ಎಸ್. ಎಲ್. ಸಿ ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ಉಜಿರೆ ಅನುಗ್ರಹ ಶಾಲಾ ವಿದ್ಯಾರ್ಥಿನಿ ಶಾರನ್ ಡಿಸೋಜಾ, ಮಡಂತ್ಯಾರು ಸೆಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜ್ ವಾಣಿಜ್ಯ ವಿಭಾಗದ ವಿದ್ಯಾರ್ಥಿ ತಾಲೂಕಿಗೆ ಪ್ರಥಮ ಜೋಶನ್ ಡಿಸೋಜಾ, ಮಡಂತ್ಯಾರು ಸೆಕ್ರೆಡ್ ಹಾರ್ಟ್ ಕಾಲೇಜಿನ ಎಂ. ಕಂ.ನಲ್ಲಿ 10ನೇ ರ‍್ಯಾಂಕ್ ಪಡೆದ ಮಿಶಲ್ ಮಿರಂದ ಇವರನ್ನು ಸನ್ಮಾನಿಸಲಾಯಿತು.

ಸಂಘದ ಸದಸ್ಯರ 33 ಮಕ್ಕಳಿಗೆ ರೂ.3 ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಡೇನಿಸ್ ಸಿಕ್ವೆರಾ, ನಿರ್ದೇಶಕರಾದ ಜೇಮ್ಸ್ ಡಿ’ಸೋಜ, ಹೆರಾಲ್ಡ್ ಪಿಂಟೊ, ಜೋಸೆಫ್ ಪೀಟ‌ರ್ ಸಲ್ದಾನ್ಹಾ, ಅಲ್ಫೋನ್ಸ್ ರೊಡ್ರಿಗಸ್, ವಿನ್ಸೆಂಟ್ ಪ್ರಕಾಶ್ ಪಿಂಟೊ, ತೋಮಸ್ ಆ‌ರ್.ನೊರೊನ್ಹಾ, ಪ್ರಸಾದ್ ಪಿಂಟೊ, ರಫಾಯಲ್ ವೇಗಸ್, ಪೌಲಿನ್ ರೇಗೊ, ಪ್ಲಾವಿಯಾ ಡಿ’ಸೋಜಾ, ವಿನಯ್ ಜಾನ್ಸನ್ ಡಿಸೋಜ, ರಿಯೋ ಮೈಕಲ್ ರೊಡ್ರಿಗಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.

ಅಳದಂಗಡಿ ಶಾಖಾ ವ್ಯವಸ್ಥಾಪಕ ಜೆರೋಮ್ ಡಿ’ಸೋಜ ಮಹಾ ಸಭೆ ನಡವಳಿಕೆ, ಕೇಂದ್ರ ಕಛೇರಿ ಶಾಖಾ ವ್ಯವಸ್ಥಾಪಕಿ ಶಾಂತಿ ಸಿ.ಡಿ. ನೋಟಿಸ್ ಓದಿ ರೆಕಾರ್ಡ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್ ವರದಿ, ಲೆಕ್ಕ ಪತ್ರ ಮಂಡಿಸಿದರು.

ನಾರಾವಿ ಶಾಖಾ ವ್ಯವಸ್ಥಾಪಕ ವಾಲ್ಟರ್ ಡಿ’ಸೋಜ, ವೇಣೂರು ಶಾಖಾ ವ್ಯವಸ್ಥಾಪಕಿ ಮೀನಾ ಮಿರಂದ, ಸಿಬಂದಿಗಳಾದ ಸುನಿತಾ ಪಾಯ್ಸ್, ಅಜಯ್ ರೊಡ್ರಿಗಸ್, ವಿಲ್ಫ್ಡ್ ಡಿಸೋಜ, ಲ್ಯಾನ್ಸಿ ಲೋಬೊ, ಜಾನೆಟ್ ಜೆಸ್ವಿಟಾ ಕ್ರಾಸ್ತಾ, ಪ್ರತಿಮಾ ಪ್ಲಾವಿಯಾ ಕ್ರಾಸ್ತಾ, ರಶ್ಮಿ ಲೋಬೊ, ರೋಯಲ್ ಮೋರಸ್, ಜೋಯಲ್‌ ಡಿ’ಸೋಜಾ, ಸೋಹನ್ ವಿಶಾಲ್ ವೇಗಸ್, ಸ್ಟೆಲ್ಲಾ ಲೋಬೊ, ವಿನೋದ್ ಡಿ’ಸೋಜಾ, ವಿಲ್ಮಾ ರೊಡ್ರಿಗಸ್, ಸುಪ್ರಿತಾ ಮೆನೇಜಸ್, ಶಿಲ್ಪ ಎಂ. ಸಹಕರಿಸಿದರು.

ಮಹಾಸಭೆಯಲ್ಲಿ ಸ್ಥಾಪಕ ಪ್ರವರ್ತಕ ಪೀಟರ್ ಕ್ಯಾಲಿಸ್ಟ್ ಡಿಸೋಜಾ, ಫ್ರಾಂಕಿ ಡಿಸೋಜಾ, ಮಾಜಿ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್, ಅಲೋಸಿಯಸ್ ಲೋಬೊ,ಮಾಜಿ ಉಪಾಧ್ಯಕ್ಷರಾದ ಆಲ್ಬರ್ಟ್ ಡಿಸೋಜಾ, ಜೋಸೆಫೀನ್ ಪಿಂಟೊ, ಸಿಪ್ರಿಯನ್ ಫೆರ್ನಾಂಡಿಸ್, ಲಾರೆನ್ಸ್ ಡೆಸಾ, ಮಾಜಿ ನಿರ್ದೇಶಕರಾದ ಎಲಿಯಾಸ್ ಪಾಯ್ಸ್, ರುಡಾಲ್ಫ್ ಡಿ’ಸೋಜ,ಲಾರೆನ್ಸ್ ಡಿಸೋಜಾ, ವಲೇರಿಯನ್ ಪಾಯ್ಸ್, ಸಿರಿಲ್ ಪಾಯ್ಸ್, ಎಲಿಯಾಸ್ ಪಾಯ್ಸ್, ವಿನ್ಸೆಂಟ್ ರೊಡ್ರಿಗಸ್,ಜೋಕಿಂ ಕ್ರಾಸ್ತ, ಸಂಘದ ಕಾನೂನು ಸಲಹೆದಾರರಾದ ಸೇವಿಯರ್ ಪಾಲೇಲಿ, ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಅಧ್ಯಕ್ಷ ಹೆನ್ರಿ ಲೋಬೊ ಸ್ವಾಗತಿಸಿ, ನಿರ್ದೇಶಕ ವಿನಯ್ ಜಾನ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಡೇನಿಸ್‌ ಸಿಕ್ವೆರಾ ವಂದಿಸಿದರು.

LEAVE A REPLY

Please enter your comment!
Please enter your name here