ನಾವೂರು: ಸರಕಾರಿ ಪ್ರೌಡ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

0

ನಾವೂರು: ಸರಕಾರಿ ಪ್ರೌಡ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಶಾಲಾ ಮುಖ್ಯ ಶಿಕ್ಷಕ ರಾಜೇಂದ್ರ ಭಟ್ ಅವರ ಮುಂದಾಳತ್ವದಲ್ಲಿ ಶಾಲೆಯ ಎಲ್ಲಾ ಶಿಕ್ಷಕರ ಸಹಯೋಗದೊಂದಿಗೆ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಉಮೇಶ್ ಪ್ರಭು ಹಡೀಲ್ ಅವರ ಉಪಸ್ಥಿತಿ ಯಲ್ಲಿ ನಾವೂರಿನ ಪ್ರಸಿದ್ಧ ವೈದ್ಯ ಡಾಕ್ಟರ್ ಪ್ರದೀಪ್ ಅವರು ದ್ವಜಾರೋಹಣ ಮಾಡಿ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು.

ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಆಟೋ ಮಾಲಕ ಚಾಲಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪುರಮೆರವಣಿಗೆಯಲ್ಲಿ ಎಲ್ಲಾ ದೇಶಭಕ್ತ ಬಂದುಗಳು ವಿದ್ಯಾರ್ಥಿಗಳೊಂದಿಗೆ ಘೋಷವಾಕ್ಯ ಕೂಗುತ್ತ ಮುನ್ನಡೆದರು.ನಂತರ ಮಕ್ಕಳ ಸಾಂಸ್ಕತಿಕ ಕಾರ್ಯಕ್ರಮ ನೆರವೇರಿತು.ವಿಶೇಷ ಭೋಜನದ ಜೊತೆಗೆ ಗ್ರಾಮ ಪಂಚಾಯತ್,ಸಂಘ ಸಂಸ್ಥೆಗಳು ನೀಡಿದ ಸಿಹಿ ತಿಂಡಿ ಸ್ವೀಕರಿಸಿ ಕಾರ್ಯಕ್ರಮಕ್ಕೆ ವಿರಾಮ ನೀಡಲಾಯಿತು.ಶಿಕ್ಷಕಕಿಯರಾದ ಪುಷ್ಪ, ವಿನೋದ ಮತ್ತು ಮೀನ ರವರು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡಿದರು .

ಕಾರ್ಯಕ್ರಮವನ್ನು ನಿಖಿಲಾ ಸ್ವಾಗತಿಸಿದರು. ಭವ್ಯ ನಿರೂಪಿಸಿದರು. ಜಯಶ್ರೀ ವಂದಿಸಿದರು.

LEAVE A REPLY

Please enter your comment!
Please enter your name here