ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ಬೆಳ್ತಂಗಡಿ ಕ್ಷೇತ್ರದ ಮಹಾಸಭೆ, ಆಟಿಡ್ ಒಂಜಿ ದಿನ ಆಟೋಟ

0

ಬೆಳ್ತಂಗಡಿ: ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಷನ್ ಬೆಳ್ತಂಗಡಿ ಕ್ಷೇತ್ರ ಸಮಿತಿಯ ಮಹಾ ಸಭೆ ಮತ್ತು ಆಟಿಡ್ ಒಂಜಿ ದಿನ ಆಟೋಟ ಸ್ಪರ್ದೆಗಳು ಆಟಿಯ ತಿಂಡಿ ತಿನಸುಗಳ ಸವಿ ಭೋಜನ ಕಾರ್ಯಕ್ರಮ ಅ.5 ರಂದು ಬೆಳ್ತಂಗಡಿ ಸಂತೆಕಟ್ಟೆ ಪಿನಾಕಿ ಸಭಾಭವನ ಮುಂಬಾಗದಲ್ಲಿ ಜರಗಿತು. ಕ್ಷೇತ್ರ ಸಮಿತಿಯ ಅಧ್ಯಕ್ಷೆ ವೇದಾವತಿ ಜನಾರ್ಧನ ಅವರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗುರುವಾಯನಕೆರೆ ಎಕ್ಸೆಲ್ ಸಮೂಹ ಸಂಸ್ತೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿ ಟೈಲರ್ ಸಂಘ ತಾಲೂಕಿನಲ್ಲಿ ಪ್ರತಿಷ್ಠಿತ ಸಂಘವಾಗಿದೆ ನಿಮ್ಮ ಸಂಘದ ಬಗ್ಗೆ ನನಗೆ ಅಪಾರ ಅಭಿಮಾನವಿದೆ ಕಾಯಕವೇ ಕೈಲಾಸ ಎಂಬಂತೆ ನಾವು ಯಾವುದೇ ಕೆಲಸ ಮಾಡುವುದಿದ್ದರೆ ಶ್ರದ್ಧೆಯಿಂದ ಮಾಡಬೇಕು ನಾವು ಮಾಡುವ ಕೆಲಸ ನಂ. 1 ಆಗಿರಬೇಕು ನನ್ನನ್ನು ಗುರುತಿಸಿ ಗೌರವಿಸಿದಕ್ಕೆ ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ ರಾಜ್ಯ ಪ್ರಧಾನ ಕಾರ್ಯದರ್ಷಿ ಎ. ಪ್ರಜ್ವಲ್ ಕುಮಾರ್, ಜಿಲ್ಲಾ ಅಧ್ಯಕ್ಷ ವಿದ್ಯಾ ಶೆಟ್ಟಿ, ರಾಜ್ಯ ಸಮಿತಿಯ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್,ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷರು ಜಿಲ್ಲಾಸಮಿತಿಯ ಪ್ರಸ್ತುತ ಉಪಾಧ್ಯಕ್ಷರು ಶಾಂಭವಿ ಪಿ. ಬಂಗೇರ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ಜಯಂತ್ ಉರ್ಲಾಂಡಿ ಕ್ಷೇತ್ರದ ಪ್ರದಾನ ಕಾರ್ಯದರ್ಶಿಯಾದ ನಾಗೇಶ್ ಕುಮಾರ್, ಕ್ಷೇತ್ರದ ಕೋಶಾದಿಕಾರಿ ರವೀಂದ್ರ ಗೇರುಕಟ್ಟೆ ಮಾಜಿ ಜಿಲ್ಲಾ ಸಮಿತಿಯ ಸದಸ್ಯರಾದ ರಾಜು ಪುಜಾರಿ ಹಾಗೂ 9 ವಲಯದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜೆಇಇ ಪರೀಕ್ಷಯಲ್ಲಿ ರಾಷ್ಟ್ರ ಮಟ್ಟದಲ್ಲಿ 1542 ನೇ ರೆಂಕ್ ಪಡೆದ ಅಚಿಂತ್ಯಾ ದಾಸ್ ಮತ್ತು ಎಸ್. ಎಸ್. ಎಲ್. ಸಿ ಯಲ್ಲಿ 600 ಅಂಕ ಪಡೆದ ಹರ್ಷಿತ್ ರವರನ್ನು ಹಾಗೂ ಜಿಲ್ಲಾಸಮಿತಿಯ ಮಾಜಿ ಅಧ್ಯಕ್ಷ ಪ್ರಜ್ವಲ್ ಕುಮಾರ್ ಮಂಗಳೂರು, ಮಾಜಿ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ಪುತ್ತೂರು, ಬೆಳ್ತಂಗಡಿ ವಲಯದ ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ ,ಕಾರ್ಯದರ್ಶಿ ವಸಂತ್ ಪುಜಾರಿ ಹಾಗೂ ಪ್ರಸ್ತುತ ಅಧ್ಯಕ್ಷೆ ವೇದಾವತಿ ಜನಾರ್ಧನ, ಕಾರ್ಯದರ್ಶಿ ನಾಗೇಶ್ ಕುಮಾರ್ ಉಜಿರೆ, ಕೋಷಾದಿಕಾರಿ ರವೀಂದ್ರ ಗೇರುಕಟ್ಟೆ ಇವರನ್ನು ಸನ್ಮಾನಿಸಲಾಯಿತು.

ನಂತರ ನೂತನ ಸಮಿತಿ ರಚನೆ ಮಾಡಲಾಯಿತು. ಉಮೇಶ್ ನಡ ಪ್ರಾರ್ಥನೆ ಗೈದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ಗೌಡ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷರು ಮೋಹನ್ ದಾಸ್ ಅಳದಂಗಡಿ ನಿರೂಪಿಸಿದರು ಜಿಲ್ಲಾ ಸಮಿತಿಯ ಉಪಾಧ್ಯಕ್ಷರು ಶಾಂಭವಿ ಪಿ. ಬಂಗೇರ ವಂದಿಸಿದರು.

LEAVE A REPLY

Please enter your comment!
Please enter your name here