
ರೆಖ್ಯ: ರಾಷ್ಟ್ರೀಯ ಹೆದ್ದಾರಿ 75 ರ ರೆಖ್ಯ ಸಮೀಪ ಬೆಂಗಳೂರಿನಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ. ಸಿ ಬಸ್ ಮತ್ತು ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಸ್ವಿಫ್ಟ್ ಕಾರ್ ನಡುವೆ ಆ.5ರಂದು ಅಪಘಾತ ಸಂಭವಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಲ್ಲಿ ಒಬ್ಬರಿಗೆ ತೀವ್ರ ತರದ ಗಾಯಗಳಾಗಿದ್ದು, ಇನ್ನೊಬ್ಬರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಇಂದು ಒಂದೇ ದಿನ ಇದು ಎರಡನೇ ಅಪಘಾತ ಎಂದು ರೆಖ್ಯ ಗ್ರಾಮಸ್ಥರು ಸುದ್ದಿ ನ್ಯೂಸ್ ಗೆ ತಿಳಿಸಿದ್ದು ಏಕ ಮುಖ ಸಂಚಾರಕ್ಕೆ ಬಿಟ್ಟಿರುವುದು ಮತ್ತು ದೊಡ್ಡ ದೊಡ್ಡ ತಿರುವುಗಳನ್ನು ಈ ರಸ್ತೆ ಹೊಂದಿರುವುದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.