
ಧರ್ಮಸ್ಥಳ: ಜು.28ರಂದು ಧರ್ಮಸ್ಥಳ ಸಮೀಪದ ಬೊಳಿಯಾರು, ಮುಳಿಕ್ಕಾರ್ ಎಂಬಲ್ಲಿ ಒಂಟಿ ಆನೆ ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ಪ್ರತ್ಯಕ್ಷವಾಗಿದೆ. ರಸ್ತೆ ಬದಿ ಬಸ್ ನಿಲ್ದಾಣದಲ್ಲಿ ಶಾಲಾ ಮಕ್ಕಳು ಬಸ್ ಗಾಗಿ ಕಾಯುತ್ತಿದ್ದ ವೇಳೆ ಒಂಟಿ ಸಲಗ ಬಸ್ ನಿಲ್ದಾಣದ ಕಡೆಗೆ ನುಗ್ಗಿ ಬಂದಿದೆ. ಸ್ಥಳದಲ್ಲಿದ್ದ ಮಕ್ಕಳು ಬೃಹತ್ ಗಾತ್ರದ ಆನೆಯನ್ನು ಕಂಡು ಭಯಭೀತರಾಗಿ ಅಂಗಡಿ ಒಳಗೆ ಸೇರಿ ಪರಾದ ಘಟನೆ ನಡೆದಿತ್ತು. ಬಳಿಕ ಆನೆ ಕಾಡಿನತ್ತ ಸಂಚರಿಸಿದ್ದು,
ಘಟನಾ ಸ್ಥಳಕ್ಕೆ

ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಕ್ಲಿಫರ್ಡ್ ಲೋಬೊ, ಉಪ ವಲಯ ಅರಣ್ಯಧಿಕಾರಿ ಕಂ ಮೋಜಣಿದಾರರು ನಾಗೇಶ್, ರವಿಚಂದ್ರ, ಹಾಗೂ ಗಸ್ತು ಅರಣ್ಯ ಪಾಲಕರು ಸಂತೋಷ್ ಕುಮಾರ್, ರವಿಜಟ್ಟಿ ಮುಕ್ರಿ, ಸಿಬ್ಬಂದಿಗಳ ಜೊತೆ ಬೊಳಿಯಾರ್, ಮುಳೀಕ್ಕಾರು, ನೇರ್ತನೆ ಭಾಗದ ಜನರೊಂದಿಗೆ ಮಾತುಕತೆ ನಡೆಸಿದರು.
ರಸ್ತೆ ಬದಿಯ ಎಲ್ಲಾ ಗಿಡಗಳನ್ನು ತೆರವು ಮಾಡಲು ಸೂಚಿಸಿದ್ದಾರೆ. ಮತ್ತು ಎಚ್ಚರಿಕೆಯ ಸೂಚನ ಫಲಕವನ್ನು ಅಳವಡಿಸಲು ಇಲಾಖೆಯ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.