
ಗುರುವಾಯನಕೆರೆ: ದ.ಕ. ಜಿಲ್ಲಾ ಪಿ.ಯು. ಇಂಗ್ಲಿಷ್ ಉಪನ್ಯಾಸಕರ ವೇದಿಕೆ, ದ.ಕ ಜಿಲ್ಲಾ ಪ್ರಾಂಶುಪಾಲರ ಸಂಘ ಮತ್ತು ಎಕ್ಸೆಲ್ ಪಿಯು ಕಾಲೇಜು, ಕುವೆಟ್ಟು, ಗುರುವಾಯನಕೆರೆ, ಬೆಳ್ತಂಗಡಿ ತಾಲೂಕು ಇವರ ಸಹಯೋಗದಲ್ಲಿ ಒಂದು ದಿನದ ಕಾರ್ಯಾಗಾರ 2025 ಜು.24ರಂದು ಎಕ್ಸೆಲ್ ಪದವಿ ಪೂರ್ವ ಕಾಲೇಜುನಲ್ಲಿ ನಡೆಯಿತು.
ಪರೀಕ್ಷಾ ಮಂಡಳಿ, ಕೆ.ಎಸ್.ಇ.ಎ.ಬಿ. ಬೆಂಗಳೂರು ಜಂಟಿ ನಿರ್ದೇಶಕ ಮಹಾಲಿಂಗಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ದ.ಕ. ಜಿಲ್ಲೆ ಶಾಲಾ ಶಿಕ್ಷಣ ಇಲಾಖೆ (ಪೂರ್ವ ವಿಶ್ವವಿದ್ಯಾಲಯ) ಉಪ ನಿರ್ದೇಶಕಿ ರಾಜೇಶ್ವರಿ ಹೆಚ್. ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಕ್ಸೆಲ್ ಪಿಯು ಕಾಲೇಜು, ಗುರುವಾಯನಕೆರೆ ಇದರ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ದ.ಕ.ಜಿಲ್ಲೆ ಪ್ರಾಚಾರ್ಯರ ಸಂಘ ಅಧ್ಯಕ್ಷ ಜಯಾನಂದ ಎನ್. ಸುವರ್ಣ, ಎಕ್ಸೆಲ್ ಕಾಲೇಜು ವಿದ್ಯಾ ಸಾಗರ್ ಕ್ಯಾಂಪಸ್ ಪ್ರಿನ್ಸಿಪಾಲ್ ಡಾ.ನವೀನ್ ಕುಮಾರ್ ಮಾರಿಕೆ, ಮೊದಲಾದವರು ಭಾಗವಹಿಸಿದ್ದರು.
ಪದವಿ ಪೂರ್ವ ಕಾಲೇಜು ಸಂಘದ ಅಧ್ಯಕ್ಷ ಸೋಮಶೇಖರ್ ನಾಯಕ್, ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ, ಖಜಾಂಚಿ ಸಿಂಥಿಯಾ ಅವಿತಾ ಡಿ’ಸೋಜಾಲ, ಅನುರಾಧಾ ಕೆ. ರಾವ್, ತರಬೇತಿ ಸಂಯೋಜಕರು
ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು, ಇಂಗ್ಲಿಷ್ ಉಪನ್ಯಾಸಕರು ಭಾಗವಹಿಸಿದ್ದರು.
ವ್ಯಾಕರಣ ಆಧಾರಿತ ಗುಣಾತ್ಮಕ ಉತ್ತರಗಳು ಮತ್ತು ಮೌಲ್ಯಮಾಪನ ಪ್ರಕ್ರಿಯೆ ಸಂಪನ್ಮೂಲ ವ್ಯಕ್ತಿ ಪುಂಡರೀಕಾಕ್ಷ ಕೊಡೆಂಚ ಉಪ ಆಡಳಿತಾಧಿಕಾರಿ, ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ ಉಡುಪಿ,
ಅಧಿವೇಶನ ಸಂಯೋಜಕರು ಅಬ್ದುಲ್ ಸಮದ್ ಇಂಗ್ಲಿಷ್ ಉಪನ್ಯಾಸಕರು ಸರ್ಕಾರಿ ಪಿಯು ಕಾಲೇಜು ಗಾಂಧಿ ನಗರ ಸುಳ್ಯ, ನೂತನ ಕಾರ್ಯಕಾರಿ ಸಮಿತಿ ರಚನೆ, ನಿಧಾನವಾಗಿ ಕಲಿಯುವವರಿಗೆ ಪಾಸಿಂಗ್ ಪ್ಯಾಕೇಜ್, ಸಂಪನ್ಮೂಲ ವ್ಯಕ್ತಿ ರಾಧೇಶ್ ತೋಳ್ಪಾಡಿ ಎಸ್., ಇಂಗ್ಲಿಷ್ ಉಪನ್ಯಾಸಕರು, ಸರ್ಕಾರಿ ಪಿಯು ಕಾಲೇಜು, ಬೆಂಜನಪದವು, ಅಧಿವೇಶನ ಸ್ಮಿತಾ ಎ. ಅವರು ಕಾರ್ಯಾಗಾರ ನಡೆಸಿಕೊಟ್ಟರು.