ಬೆಳಾಲು: ಗ್ರಾಮದ ದೊಂಪದಪಲ್ಕೆ (ಮೀನಂದೇಲು) ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜೀಪು ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದ ಘಟನೆ ಜು.21ರಂದು ಸಂಜೆ ನಡೆದಿದೆ.
ಈ ಅವಘಡದಲ್ಲಿ ಬಂದಾರು ಗ್ರಾಮದ ಬೈಪಾಡಿ ಸಮೀಪದ ನಿವಾಸಿ ಭಾರತೀಯ ಸೇನಾ ಯೋಧ ಲಿಂಗಪ್ಪ ಎಂಬವರು ಗಾಯಗೊಂಡಿದ್ದಾರೆ. ರಜೆಯಲ್ಲಿರುವ ಸೇನಾ ಯೋಧ ಲಿಂಗಪ್ಪ ಅವರು ಜೀಪಿನಲ್ಲಿ ಹೋಗಿ ಬರುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿದ ಪರಿಣಾಮ ಜೀಪು ಉರುಳಿ ಅಪಘಾತ ಸಂಭವಿಸಿದೆ.
ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.