ಬೆಳ್ತಂಗಡಿ: ಕೊಕ್ಕಡ ಕಾಡಾನೆಗಳ ಹಾವಳಿಯಿಂದಾಗಿ ದುಬಾರೆಯ ವಿಶೇಷ ತಂಡ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಆದರೆ, ಪೆರಿಯಶಾಂತಿ ಬಳಿ ಕಾಡಾನೆಗಳು ಮತ್ತೆ ಮತ್ತೆ ಬೀದಿಬದಿ ಅಂಗಡಿಗಳತ್ತ ಬರುತ್ತಿವೆ.

ಅಲ್ಲಿ ಹಲಸಿನ ಹಣ್ಣು ಮಾರಾಟ ಮಾಡುತ್ತಿದ್ದು, ಅಲ್ಲದೆ ಹಲಸಿನ ಹಣ್ಣಿನ ತ್ಯಾಜ್ಯ ಅಲ್ಲಲ್ಲೇ ಎಸೆದಿದ್ದು ಅದರ ವಾಸನೆಗೆ ಆನೆಗಳು ಪೆರಿಯಶಾಂತಿಯತ್ತ ಬರುತ್ತಿರುವುದರಿಂದ ಆತಂಕ ಮನೆ ಮಾಡಿದೆ. ಅಲ್ಲದೆ ಆನೆಗಳು ಈಗಾಗಲೇ ಅಲ್ಲಿಗೆ ಆಗಮಿಸಿದ್ದು,ಅಲ್ಲಿ ಲದ್ದಿ ಕಂಡುಬಂದಿದ್ದು ಆತಂಕಕ್ಕೆ ಕಾರಣವಾಗಿದೆ.

ಇದಕ್ಕಾಗಿ ಆನೆಗಳ ಕಾರ್ಯಾಚರಣೆಗೆ ನೆರವಾಗಲು ಅಂಗಡಿಗಳ ತೆರವುಗೊಳಿಸಲು ಅರಣ್ಯ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಇಲ್ಲವಾದಲ್ಲಿ ಕಾಡಾನೆಗಳ ದಾಳಿಗೆ ತುತ್ತಾಗುವ ಭೀತಿಯಿದೆ ಎಂಬುದಾಗಿ ಎಚ್ಚರಿಸಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಸುದ್ದಿಗೆ ಮಾಹಿತಿ ನೀಡಿದ್ದಾರೆ.