ಪದ್ಮುಂಜ: ಟವರ್ ವ್ಯಾಪ್ತಿಯ ಸಿಎ ಬ್ಯಾಂಕ್ ವಠಾರದಲ್ಲಿ ಬಿ.ಎಸ್.ಎನ್.ಎಲ್. ಉಚಿತ ಸಿಮ್ ಮೇಳ ಜು. 19ರಂದು ನಡೆಯಿತು. ಊರಿನ ನಾಗರಿಕರು ಬಹಳ ಹುಮ್ಮಸ್ಸಿನಿಂದ ಬಂದು ಉಚಿತ ಸಿಮ್ ಪಡೆದುಕೊಂಡರು. ಬಿ.ಎಸ್.ಎನ್.ಎಲ್. ರೀಟೇಲರ್ ಮಾರ್ಕೇಟಿಂಗ್ ಮ್ಯಾನೇಜರ್ ಸುರೇಂದ್ರ, ಪ್ರಾಸೇಂಚ್ ಮ್ಯಾನೇಜರ್ ಸುಧಾಕರ್ ಶೆಟ್ಟಿ, ಟೆಕ್ನೀಶನ್ ಯೋಗೇಶ್ ಅವರು ಉಪಸ್ಥಿತರಿದ್ದರು.