ಬೆಳ್ತಂಗಡಿ: ಇಂದಬೆಟ್ಟು ವಲಯದ ನಾವೂರು ವಿಭಾಗದ ಆಲೆಕ್ಕಿಯಲ್ಲಿ ಗೋಪಾಲಕೃಷ್ಣ ಜ್ಞಾನವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭ ನಡೆದಿದ್ದು, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರಿಯಾ ಲಕ್ಷ್ಮಣ್ ದೀಪ ಬೆಳಗಿಸಿ ಉದ್ಘಾಟಿಸಿ ಹೇಮಾವತಿ ಹೆಗ್ಗಡೆ ಅವರು ಪ್ರಾರಂಭಿಸಿದ ಜ್ಞಾನವಿಕಾಸ ಕಾರ್ಯಕ್ರಮ ಮಹಿಳೆಯರಿಗೆ ಉತ್ತಮ ಮಾಹಿತಿಯೊಂದಿಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಮಹಿಳೆಯ ಪ್ರತಿಭೆಯನ್ನು ಹೊರಹಾಕಲು ಕೇಂದ್ರವು ಉತ್ತಮ ವೇದಿಕೆಯಾಗಿದೆ ಎಂದರು.
ಮೇಲ್ವಿಚಾರಕಿ ಉಷಾ ಎಲ್ಲರೂ ಕೇಂದ್ರದ ಸಭೆಯಲ್ಲಿ ಆಸಕ್ತಿಯಿಂದ ಭಾಗವಹಿಸುವಂತೆ ತಿಳಿಸಿದರು. ಜ್ಞಾನವಿಕಾಸ ಸಮನ್ವಯಧಿಕಾರಿ ಮಧುರಾ ವಸಂತ್ ಜ್ಞಾನ ವಿಕಾಸ ಕೇಂದ್ರದ ಧ್ಯೇಯೋದ್ದೇಶಗಳು ಕೇಂದ್ರದ ಸಭೆಯಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಂಯೋಜಕಿ ರೋಹಿಣಿ ಉಪಸ್ಥಿತರಿದ್ದರು. ಗುಲಾಬಿ ಆವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸುನೀತಾ ಸ್ವಾಗತಿಸಿದರು. ಸೇವಾಪ್ರತಿನಿಧಿ ಪುಷ್ಪ ಧನ್ಯವಾದ ನೀಡಿದರು.