ಅಳದಂಗಡಿ: ಪ್ರತೀಕ್ ಶೆಟ್ಟಿ ನೊಚ್ಚ ಇವರ ಮಾಲಕತ್ವದ ನೊಚ್ಚ ಸೆರಾಮಿಕ್ಸ್ (ಪ್ರತಿಷ್ಠಿತ ಓರಿಯೆಂಟ್ ಬೆಲ್ ಟೈಲ್ಸ್ ನ ಅಧಿಕೃತ ಮಾರಾಟಗಾರರು) ಇದರ ಶುಭಾರಂಭವು ಅಳದಂಗಡಿ ಶ್ರೀ ಲಕ್ಷ್ಮೀ ಕಟ್ಟಡದಲ್ಲಿ ಜು.14ರಂದು ನಡೆಯಿತು. ಶಾಸಕ ಹರೀಶ್ ಪೂಂಜ ಅವರು ನೂತನ ಸಂಸ್ಥೆಯ ಉದ್ಘಾಟನೆಯನ್ನು ನೇರವೇರಿಸಿ ಶುಭಕೋರಿದರು.
ಮುಖ್ಯ ಅತಿಥಿಗಳಾಗಿ ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ, ಪ್ರಗತಿಪರ ಕೃಷಿಕ ಎಮ್.ಗಂಗಾಧರ ಮಿತ್ತಮಾರ್, ವೈದ್ಯರಾದ ಡಾ.ಎನ್.ಎಮ್. ತುಳಪುಳೆ, ಕಟ್ಟಡ ಮಾಲೀಕರಾದ ಡಾ.ಪ್ರಶಾಂತ್ ದೇವಾಡಿಗ, ಓರಿಯೆಂಟ್ ಬೆಲ್ ಟೈಲ್ಸ್ ಶಾಖಾ ಮುಖ್ಯಸ್ಥ ಶರೀಫ್ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸಂಜೀವ ಪೂಜಾರಿ ಕೊಡಂಗೆ, ರಬ್ಬರ್ ಸೊಸೈಟಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ, ವಕೀಲ ಸಜಿತ್ ಕುಮಾರ್ ಜೈನ್, ಉದ್ಯಮಿ ಪುಷ್ಪರಾಜ್ ಶೆಟ್ಟಿ, ಸುಲ್ಕೇರಿ ಶ್ರೀರಾಮ ಶಾಲೆಯ ಮುಖ್ಯಸ್ಥ ರಾಜು, ಪ್ರಮುಖರಾದ ಶುಭಾಶ್ಚಂದ್ರ ರೈ ಪದ್ಯೋಡಿ ಗುತ್ತು, ಚಂದ್ರಹಾಸ್ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್, ನವೀನ್ ಕೆ. ಸಾಮಾನಿ ಕರಂಬಾರು, ಹೆಚ್.ಎಲ್. ರಾವ್, ಸಂಜೀವ ಶೆಟ್ಟಿ ಕುಂಠಿನಿ, ಜಯಂತ್ ಶೆಟ್ಟಿ ಕುಂಠಿನಿ, ಲ.ದೇವದಾಸ್ ಶೆಟ್ಟಿ ಹಿಬರೋಡಿ, ಕಿರಣ್ ಕುಮಾರ್ ಶೆಟ್ಟಿ ಗುರುವಾಯನಕೆರೆ, ನಿತ್ಯಾನಂದ ಎನ್. ನಾವರ, ವಿಜಯ್ ಕುಮಾರ್ ಜೈನ್, ಪ್ರದೀಪ್ ಶೆಟ್ಟಿ ಪಿಲ್ಯ, ಪ್ರಶಾಂತ್ ಶೆಟ್ಟಿ ಅಳದಂಗಡಿ, ಜಗನ್ನಾಥ ಶೆಟ್ಟಿ ಅಳದಂಗಡಿ ಪ್ರಸಾದ್ ಪಿಂಟೊ, ಹಿಲರಿ ಫೆರ್ನಾಂಡಿಸ್, ವಿಠಲ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ಶ್ರೀಮತಿ ಮತ್ತು ನಿತ್ಯಾನಂದ ಶೆಟ್ಟಿ, ಪ್ರಕಾಶ್ ಶೆಟ್ಟಿ ನೊಚ್ಚ ಹಾಗೂ ಸಹೋದರರು, ಸಹೋದರಿಯರು ಮತ್ತು ಮಾಲಕ ಪ್ರತೀಕ್ ಶೆಟ್ಟಿ ನೊಚ್ಚ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಸರ್ವರ ಸಹಕಾರ ಕೋರಿದರು.