ಕಡಿರುದ್ಯಾವರ: ಗ್ರಾಮದ ಮಲ್ಲಡ್ಕ ಪರಿಸರದಲ್ಲಿ ಕೃಷಿ ತೋಟಗಳಿಗೆ ನುಗ್ಗಿದ ಆನೆ, ಕೃಷಿಗೆ ಹಾನಿ ಉಂಟು ಮಾಡಿದ ಘಟನೆ ಜು.1ರಂದು ನಡೆದಿದೆ. ತಡರಾತ್ರಿ ಭಾರತಿ ಹೆಬ್ಬಾರ್, ರಮೇಶ್ ಹಾಗೂ ಇತರರ ತೋಟಗಳಿಗೆ ದಾಳಿ ಇಟ್ಟ ಒಂಟಿ ಸಲಗ ಅಡಕೆ ಮರ, ಬಾಳೆ ಗಿಡಗಳನ್ನು ಮುರಿದು ಹಾಕಿದೆ. ಒಂಟಿ ಸಲಗ ಮನೆಗಳ ಹತ್ತಿರದವರೆಗೂ ಸುಳಿದಿದ್ದು ಸ್ಥಳೀಯರಲ್ಲಿ ಭೀತಿಯ ವಾತಾವರಣ ಉಂಟಾಗಿದೆ.