ಬೆಳ್ತಂಗಡಿ: ಪರ್ಲಾಣಿ ಸ.ಹಿ.ಪ್ರಾ.ಶಾಲೆಯ ನೂತನ ವಿವೇಕ ಕೊಠಡಿ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಾರದಾ ಅಣಿಯೂರು ನೆರವೆರಿಸಿದರು.

ಅತಿಥಿಗಳಾಗಿ ಪ್ರಕಾಶ್ ಹೊಸಮಠ, ಕೃಷ್ಣ ರಾವ್ ಕೋಡಿತ್ತಿಲ್, ಪ್ರತಿಭಾ ಕೆವುಟಾಜೆ, ಹರೀಶ್ ಎತ್ತರಗುಡ್ಡೆ, ಸದಾಶಿವ ಕೆವುಟಾಜೆ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಪೋಷಕರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಶಾಲಾ ಶಿಕ್ಷಕರು ಮಕ್ಕಳು ಊರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಮುಖ್ಯ ಶಿಕ್ಷಕ ತಮ್ಮಯ್ಯರವರು ನೆರವೇರಿಸಿದರು.