ಬೆಳ್ತಂಗಡಿ: ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿಯ ವತಿಯಿಂದ ಮೇ. 17ರಿಂದ 23ರವರೆಗೆ ಪ್ರತಿದಿನ ಸಂಜೆ ಗಂಟೆ 6ರಿಂದ 8ರವರೆಗೆ ಬೆಳ್ತಂಗಡಿ ಸಮಾಜ ಮಂದಿರದಲ್ಲಿ ವೀಣಾ ಬನ್ನಂಜೆ ಇವರಿಂದ ಭಗವದ್ಗೀತ ಪ್ರವಚನ ಸಪ್ತಾಹ ಕಾರ್ಯಕ್ರಮ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್ ಇವರ ನೇತೃತ್ವದಲ್ಲಿ ಒಂದು ವಾರ ಯಶಸ್ವಿಯಾಗಿ ನಡೆಯಿತು.
ಸಮಾರೋಪ ಸಮಾರಂಭ ಮೇ. 23ರಂದು ನಡೆಯಿತು. ವೀಣಾ ಬನ್ನಂಜೆಯವರನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ನಿವೃತ್ತ ಪ್ರಾಂಶುಪಾಲ ಪ್ರೊ. ಎ. ಕೃಷ್ಣಪ್ಪ ಪೂಜಾರಿ, ತಾಲೂಕು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ಗಂಗಾಧರ ಮಿತ್ತಮಾರು, ಮೋಹನ ಶೆಟ್ಟಿಗಾರ್ ಉಜಿರೆ, ಉಜಿರೆ ಬೆನಕ ಆಸ್ಪತ್ರೆಯ ಡಾ. ಭಾರತಿ ವೀಣಾ ಬನ್ನಂಜೆ ಯವರನ್ನು ಮತ್ತು ಕಾರ್ಯಕ್ರಮಕ್ಕೆ ಸಹಕಾರ ನೀಡಿದವರನ್ನು ಗೌರವಿಸಿದರು.
ಬೆಳ್ತಂಗಡಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷೆ ಮನೋರಮ ಭಟ್ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಸಂಯೋಜಕ ಹಿರಿಯ ವಾಹನ ನಿರೀಕ್ಷಕ ಚರಣ್ ಕೆ., ತಾಲೂಕಿನ ವಿವಿಧ ಡ್ರೈವಿಂಗ್ ಸ್ಕೂಲ್ ನ ಮಾಲಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು. ತಾಲೂಕು ಸಾರ್ವಜನಿಕ ಗಣೇಶೋತ್ಸವ ಸಮಿತಿ, ರೋಟರಿ ಕ್ಲಬ್ ಬೆಳ್ತಂಗಡಿ, ಲಯನ್ ಕ್ಲಬ್ ಬೆಳ್ತಂಗಡಿ, ಮಂಜುಶ್ರೀ ಜೆಸಿಐ ಬೆಳ್ತಂಗಡಿ, ಶ್ರೀ ಜನಾರ್ದನ ಸ್ವಾಮಿ ಸೇವಾ ಟ್ರಸ್ಟ್ ಉಜಿರೆ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳಂಗಡಿ, ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಪ್ರಗತಿ ಮಹಿಳಾ ಮಂಡಲ ಉಜಿರೆ, ತುಳು ಶಿವಳ್ಳಿ ಮಹಾಸಭಾ ಬೆಳ್ತಂಗಡಿ ತಾಲೂಕು, ಮುಗ್ಗ ಗುತ್ತು ಕುಟುಂಬಸ್ಥರ ಟ್ರಸ್ಟ್, ಮಂಜುಶ್ರೀ ಪ್ರಿಂಟರ್ಸ್ ಉಜಿರೆ ಮೊದಲಾದ ಸಂಘಟನೆಗಳು ಸಹಕಾರ ನೀಡಿದರು. ಸುಧಾಮಣಿ ಆರ್. ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಉಪನ್ಯಾಸಕ ಶ್ರೀಶ ಕುಮಾರ್ ಪ್ರಸ್ತಾಪಿಸಿ ವಂದಿಸಿದರು.