ಸೋಣoದೂರು: ಸಬರಬೈಲು ಕುದುರೆಂಜ ಪಡಂಗಡಿ ಸಂಪರ್ಕ ರಸ್ತೆಯ ವಾದಿ ಇರ್ಫಾನ್ ಮಸೀದಿಯ ಸಮೀಪ ಕಾಲು ಸೇತುವೆ ಬಿರುಕು ಬಿಟ್ಟಿದ್ದು ಸಂಪರ್ಕ ಕಡಿತದ ಭೀತಿ ಎದುರಾಗಿದೆ. ಈ ಸೇತುವೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿದ್ದು, ಸೇತುವೆಯ ಎರಡು ಕಡೆಯ ತಡೆಗೋಡೆ ಮುರಿದು ಹೋಗಿ ಮದ್ಯದಲ್ಲಿ ನೀರು ನಿಂತು ಹೊoಡ ನಿರ್ಮಾಣವಾಗಿದೆ.

ಸೇತುವೆಯ ಕೆಳಗಡೆ ತ್ಯಾಜ್ಯಗಳು ತುಂಬಿ ಹೋಗಿದ್ದು ನೀರು ಹರಿದು ಹೋಗಲು ಅಡಚಣೆ ಉಂಟಾಗಿದೆ. ಮುಂದಾಗುವ ಬಾರೀ ಅನಾಹುತವನ್ನು ತಪ್ಪಿಸಲು ಸ್ಥಳೀಯ ಆಡಳಿತ ಇಲಾಖೆ ಎಚ್ಚೆತ್ತುಕೊಂಡು ತಕ್ಷಣ ಕಸದ ರಾಶಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಸಂಪರ್ಕ ಕಡಿತಗೊಳಿಸಲಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.