ಕಕ್ಯಪದವು: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಪ್ರಾರ್ಥನಾ ಎಚ್. ಕೆ. 625 ರಲ್ಲಿ 624 ಅಂಕವನ್ನು ಪಡೆದು ರಾಜ್ಯಕ್ಕೆ ಎರಡನೇ ರ‍್ಯಾಂಕ್, ತಾಲ್ಲೂಕಿನಲ್ಲಿ ಪ್ರಥಮ ರ‍್ಯಾಂಕ್ ಹಾಗೂ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದು ತೇರ್ಗಡೆಗೊಂಡಿರುತ್ತಾರೆ.
ಇವರು ಉಳಿ ಗ್ರಾಮದ ಕೇರಿಯಾ ನಿವಾಸಿ, ಕಕ್ಯಪದವಿನ ಉದ್ಯಮಿಯಾದ ಹರಿಶ್ಚಂದ್ರ ಮತ್ತು ಕುಶಲ ದಂಪತಿಯ ಪುತ್ರಿ.