ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಸ್ಥಾನಗಳ ಉಪಚುನಾವಣೆ ಮೇ. 25ರಂದು ನಡೆಯಲಿದ್ದು, ಬೆಳಗ್ಗೆ 6ರಿಂದ ಮತದಾನ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಉಪಚುನಾವಣೆ ನಡೆಯಲಿರುವ ಒಟ್ಟು 8 ಮತಗಟ್ಟೆ ಕೇಂದ್ರಗಳ ಸುತ್ತಮುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಆನಂದ್ ಕೆ. ಆದೇಶಿಸಿದ್ದಾರೆ.
25ರಂದು ಪ್ರದೇಶಗಳ ವ್ಯಾಪ್ತಿಯಲ್ಲಿ ನಡೆಯುವ ಸಂತೆ, ಜಾತ್ರೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. 24ರಂದು ಮಸ್ಟರಿಂಗ್ ಮತ್ತು ಮೇ. 25ರಂದು ಡಿಮಸ್ಟರಿಂಗ್ ಕಾರ್ಯ ನಡೆಯಲಿದ್ದು, 24ರಂದು ಬೆಳಗ್ಗೆ 6ರಿಂದ ಮೇ. 25ರ ಸಾಯಂಕಾಲ ಡಿಮಸ್ಟರಿಂಗ್ ಕಾರ್ಯ ಮುಕ್ತಾಯವಾಗುವವರೆಗೆ ಉಳ್ಳಾಲ ತಾಲೂಕು ಕಚೇರಿ, ಬಂಟ್ವಾಳ ತಾಲೂಕು ಆಡಳಿತ ಸೌಧ, ಸುಳ್ಯ ತಾಲೂಕು ಆಡಳಿತ ಸೌಧ ಸಭಾಂಗಣ, ಬೆಳ್ತಂಗಡಿ ಕೇಂದ್ರಗಳ ತಾಲೂಕು ಆಡಳಿತ 200 ಸೌಧ ಸಭಾಂಗಣ ಮೀ. ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.