ವ್ಯಕ್ತಿ ನಾಪತ್ತೆ: ಸಹೋದರನಿಂದ ದೂರು

0

ಬೆಳ್ತಂಗಡಿ: ಇಳಂತಿಲ ಗ್ರಾಮದ ಅಂಡೆತಡ್ಕ ಮನೆ ನಿವಾಸಿ ಅರುಣ್ ಎ. (35) ಎಂಬವರು ಮೇ.1ರಿಂದ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ನಾಪತ್ತೆಯಾದ ಅರುಣ್ ರವರ ಸಹೋದರ ಸುನಿಲ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದು, ಮೂಲತಃ ಕೇರಳ ರಾಜ್ಯದ ಕಾಸರಗೋಡು ನೀರ್ಚಾಲ್ ಗ್ರಾಮದ ನಿವಾಸಿಯಾಗಿರುವ ಇವರುಗಳು ಇಳಂತಿಲ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು, ಇಳಂತಿಲದಲ್ಲೇ ತಾತ್ಕಾಲಿಕ ವಾಸ್ತವ್ಯವನ್ನು ಹೊಂದಿದ್ದರು. ಮೇ.1ರಂದು ತನಗೆ ಹೊಟ್ಟೆ ನೋವು ಎಂದು ತಿಳಿಸಿ ಔಷಧಿಗೆಂದು ಹಣವನ್ನು ಪಡೆದು ಮನೆಯಿಂದ ಹೋದವರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿರುತ್ತಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here