ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಈಶ ಮೊಂಟೆಸ್ಸರಿ ಶಿಕ್ಷಣ ಸಂಸ್ಥೆಗೆ ಸತತ 25ನೇ ಬಾರಿಗೆ 100% ಫಲಿತಾಂಶ

0

ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಅಧೀನದಲ್ಲಿರುವ ಭಾರತ್ ಸೇವಕ್ ಸಮಾಜ್ ನ ಆಶ್ರಯದಲ್ಲಿ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈಶ ಮೊಂಟೆಸ್ಸರಿ ಶಿಕ್ಷಣ ಸಂಸ್ಥೆಯಲ್ಲಿ ಡಿ.ಎಮ್.ಇ.ಡಿ ಶಿಕ್ಷಕಿ ತರಬೇತಿ ಪರೀಕ್ಷೆಗೆ ಹಾಜರಾದ 26 ವಿದ್ಯಾರ್ಥಿನಿಯರಲ್ಲಿ 24 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿ ಮತ್ತು 2 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಗೆ ೨೫ನೇ ಬಾರಿಗೆ ಸತತ 100% ಫಲಿತಾಂಶ ಲಭಿಸಿದೆ.

ಗಾಯತ್ರಿ.ಎಂ(1155), ರಶೀದಾ ಭಾನು(1130), ಅನುಷಾ.ಸಿ.ಹೆಚ್(1128), ಫಾತಿಮತ್ ಹುಶ್ರನಾ(1097), ಸುಕನ್ಯಾ ಜಗದೀಶ್(1079), ಮುಬಾಶ್ಶಿರಾ ವಿ.ಎಂ(1072), ಸುಮನಾ(1058), ಕು.ಸ್ವಾತಿ.ಸಿ(1056), ನಿರ್ಮಲಾ.ಎಂ(1028), ಶಾಮೀನಿ(1038), ಸ್ವಾತಿ(1019), ಶಿಲ್ಪಾ.ಪೈ.ಬಿ (1017), ಝೀನಾಥ್(1014), ತಸ್ಲೀಮ ನಾಜ್(1012) , ಕು.ಸ್ನೇಹಾ ರೋಯ್(1006), ರಿನ್ಸಿ.ಯು(988), ಗ್ಲೇವಿಷಾ ಡಿ ಸೋಜಾ (961), ಭಾರತಿ ಎಂ(944), ಇಂದಿರಾ(934), ಕವಿತಾ(925), ಝಲ್ಫತ್ ಪಿ(923), ಪವಿತ್ರಾ (922), ವಿದ್ಯಾ.ಕೆ(920), ಚೈತನ್ಯ(920) ವಿಶಿಷ್ಟ ಶ್ರೇಣಿಯೊಂದಿಗೆ ಮತ್ತು ದೀಕ್ಷಿತಾ ರೈ(853), ಶಕುಂತಲಾ ವೈ(808) ಪ್ರಥಮ ದರ್ಜೆಯೊಂದಿಗೆ ಪಾಸಾಗಿ ಸಂಸ್ಥೆಗೆ 25ನೇ ಬಾರಿಗೆ 100% ಫಲಿತಾಂಶ ಲಭಿಸಿರುತ್ತದೆ.

ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಈಶ ಮೊಂಟೆಸರಿ ಶಿಕ್ಷಣ ಸಂಸ್ಥೆಗೆ ವಿಶ್ವ ಕೌಶಲ್ಯ ಕೌನ್ಸಿಲ್‌ನಿಂದ ಮಾನ್ಯತೆ ದೊರಕಿದ್ದು,ಇಲ್ಲಿ ಮೊಂಟೆಸರಿ ಶಿಕ್ಷಣ ಪಡೆದ ವಿದ್ಯಾರ್ಥಿನಿಯರಿಗೆ ಅಂಕಪಟ್ಟಿಯೊಂದಿಗೆ ವಿಶ್ವ ಕೌಶಲ್ಯ ಕೌನ್ಸಿಲ್‌ನಿಂದ ವಿವಿಧ ತರಬೇತಿಯೊಂದಿಗೆ ಸರ್ಟಿಫಿಕೇಟ್ ದೊರಕಲ್ಲಿದ್ದು ದೇಶ ವಿದೇಶಾದಾದ್ಯಂತ 100% ಉದ್ಯೋಗಾವಾಕಾಶವಿರುವುದು. 2025-26ನೇ ಸಾಲಿನ ತರಗತಿಗೆ ದಾಖಲಾತಿ ಆರಂಭಗೊಂಡಿದ್ದು ಉಚಿತ ಕಂಪ್ಯೂಟರ್, ಉಚಿತ ಸ್ಪೋಕನ್ ಇಂಗ್ಲೀಷ್, ಸಹವಾಸ ವಿಶೇಷ ಶಿಬಿರ, ಈಶ ಪ್ರತಿಭಾ ದಿನಾಚರಣೆ, ವಾರ್ಷಿಕ ಕ್ರೀಡಾಕೂಟ, ವಿಶೇಷ ಅಧ್ಯಯನ ಪ್ರವಾಸ ಇತ್ಯಾದಿ ಅವಕಾಶವಿದ್ದು ಆಸಕ್ತರಿಗೆ ಶನಿವಾರ, ಆದಿತ್ಯವಾರ ಹಾಗೂ ಸರ್ಕಾರಿ ರಜಾದಿನಗಳಂದು ವಿಶೇಷ ಆನ್‌ಲೈನ್, ಆಫ್‌ಲೈನ್ ತರಗತಿಗಳು ಲಭ್ಯವಿರುವುದು. ಮೇ. 25, 2025ರ ಒಳಗಾಗಿ ದಾಖಲಾತಿ ಆದವರಿಗೆ ಬೆಳ್ಳಿ ಹಬ್ಬದ ಪ್ರಯುಕ್ತ ಶುಲ್ಕದಲ್ಲಿ ವಿಶೇಷ ರಿಯಾಯಿತಿಗಳಿದ್ದು, ಆಸಕ್ತರು ಸಂಸ್ಥೆಯ 8722293944,9448153379 ನಂಬರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡು ಸಂಸ್ಥೆಗೆ ಆಗಮಿಸಿ ದಾಖಲಾತಿ ಮಾಡಿಕೊಳ್ಳುವಂತೆ ಈಶ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಗೋಪಾಲಕೃಷ್ಣರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here