ಶಿಶಿಲ: ಇತ್ತೀಚಿಗೆ ಶಿಶಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಕಡೆಗಳಲ್ಲಿ ಸಾಕು ನಾಯಿಗಳಿಗೆ ಹುಚ್ಚು ನಾಯಿ ಕಡಿದಿದ್ದು ಸಂಭಾವ್ಯ ರೇಬಿಸ್ ಕಾಯಿಲೆ ಹರಡದಂತೆ ತಡೆಗಟ್ಟುವ ಸಲುವಾಗಿ ಶಿಶಿಲ ಗ್ರಾಮ ಪಂಚಾಯತ್ ಮನವಿ ಮೇರೆಗೆ ಮೇ. 19ರಂದು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 140 ನಾಯಿಗಳಿಗೆ ಉಚಿತ ಚುಚ್ಚು ಮದ್ದು ನಿಡಲಾಯಿತು.
ಚುಚ್ಚು ಮದ್ದಿನ ಸಂಪೂರ್ಣ ವೆಚ್ಚವನ್ನು ಗ್ರಾಮ ಪಂಚಾಯತ್ ಒದಗಿಸಿದೆ ಎಂದು ಪಂಚಾಯತ್ ಅಧ್ಯಕ್ಷ ಸುಧೀನ್ ಡಿ. ತಿಳಿಸಿದ್ದು,
ಪಶು ಇಲಾಖೆ ಸಿಬ್ಬಂದಿಗಳಿಗೆ ಪಂಚಾಯತ್ ಸಿಬ್ಬಂದಿಗಳು ಚುಚ್ಚು ಮದ್ದು ನೀಡುವಲ್ಲಿ ಸಹಕರಿಸಿದರು.