ಮೇ. 25: ಬೆಳ್ತಂಗಡಿ ತಾಲೂಕಿನ ಆಟಗಾರರಿಗೆ ಮುಳಿಯದಿಂದ ಸಿಹಿ ಸುದ್ದಿ

0

ಬೆಳ್ತಂಗಡಿ: ಉತ್ಕೃಷ್ಟ ಗುಣಮಟ್ಟ ಹಾಗೂ ಗ್ರಾಹಕ ಸ್ನೇಹಿ ಚಿಂತನೆಯ 81 ವರ್ಷ ಪರಂಪರೆಯ ಮುಳಿಯದ ನೂತನ ನವೀಕೃತ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಬೆಳ್ತಂಗಡಿಯ ರಕ್ಷಾ ಆರ್ಕೇಡ್ ನಲ್ಲಿ ಮೇ.17ರಂದು ಅನಾವರಣಗೊಂಡಿತ್ತು. ಈ ಪ್ರಯುಕ್ತ ಬೆಳ್ತಂಗಡಿಯ ಆಟಗಾರರಿಗೆ ಸಿಹಿ ಸುದ್ದಿ ನೀಡಿರುವ ಮುಳಿಯ, ಲೆವೆಲ್ ಮಾದರಿಯ ಗ್ರಾಮ ಸೀಮಿತ 7 ಜನ ಮಹಿಳೆಯರ ಮತ್ತು 7 ಜನ ಪುರುಷರ ಬೃಹತ್ ಹಗ್ಗಜಗ್ಗಾಟ ಪಂದ್ಯಾಟವನ್ನು ಮೇ. 25ರಂದು ಆಯೋಜನೆ ಮಾಡಿದೆ.

ಬೆಳ್ತಂಗಡಿ ಮುಳಿಯದ ಹಿಂಭಾಗದ ಅಂಕಣದಲ್ಲಿ ಗ್ರಾಮ ಸೀಮಿತ ಆಟಗಾರರ ಹಗ್ಗಜಗ್ಗಾಟ ಸ್ಪರ್ಧೆಯು ಮೇ.25ರಂದು ಮಧ್ಯಾಹ್ನ 2.30 ಗಂಟೆಗೆ ನಡೆಯಲಿದ್ದು, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.‌

ಪ್ರತಿ ತಂಡಕ್ಕೆ ನೆನಪಿನ ಕಾಣಿಕೆ ಜೊತೆ ಗೆಲ್ಲುವ ತಂಡಕ್ಕೆ ಟ್ರೋಫಿ ಹಾಗೂ ನಗದು ಬಹುಮಾನ ಇರಲಿದೆ. ಸರ್ವರಿಗೂ ಉಪಹಾರದ ವ್ಯವಸ್ಥೆ, ತಂಪು ಪಾನೀಯ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗಾಗಿ 8971500130, 9900957030 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here