ಬೆಳ್ತಂಗಡಿ: ದ.ಕ. ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆದಿರುವ ಹಿನ್ನಲೆಯಲ್ಲಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮೇ.19ರಂದು ಬೆಳ್ತಂಗಡಿ ಪೇಟೆಯಲ್ಲಿ ಪಥ ಸಂಚಲನ ನಡೆಯಿತು.

ಪೊಲೀಸ್ ಇನ್ಸ್ಪೆಕ್ಟರ್ ಸುಬ್ಬಾಪೂರ್ ಮಠ್, ಬೆಳ್ತಂಗಡಿ ಟ್ರಾಫಿಕ್ ಠಾಣಾ ಎಸ್.ಐ. ಅರ್ಜುನ್, ವೇಣೂರು ಠಾಣೆಯ ಉಪನಿರೀಕ್ಷಕ ಶ್ರೀಶೈಲ, ಪುಂಜಾಲಕಟ್ಟೆ ಠಾಣೆಯ ಉಪನಿರೀಕ್ಷಕ ನಂದ ಕುಮಾರ್, ಧರ್ಮಸ್ಥಳ ಠಾಣೆಯ ಉಪನಿರೀಕ್ಷಕ ಸಮರ್ಥ್, ಬೆಳ್ತಂಗಡಿ ಠಾಣಾ ಉಪ ನಿರೀಕ್ಷಕ ಮುರಳೀಧರ್ ನಾಯ್ಕ್, ಪೊಲೀಸ್ ಠಾಣೆಯ ಕಾನ್ಸ್ ಟೇಬಲ್, ಹೆಡ್ ಕಾನ್ಸ್ ಟೇಬಲ್ಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.