ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿಯಾಗಿ ಕೆ. ಪ್ರಕಾಶ್ ಅಧಿಕಾರ ಸ್ವೀಕರಿಸಿದರು. ಇವರು ಮೂಲತಾ ಸುರತ್ಕಲ್ ಕೃಷ್ಣಾಪುರದವರಗಿದ್ದು ಮೂಲ್ಕಿ ಶಾಖೆಯಲ್ಲಿ ಮ್ಯಾನೇಜರ್ ಅಗಿ ಅಲ್ಲಿಂದ ವರ್ಗಾವಣೆಗೊಂಡು ಇಲ್ಲಿ ಅಧಿಕಾರ ಸ್ವೀಕರಿಸಿದರು. ಇವರು ಕುಮುಟಾ ಶಾಖೆ, ಮೂಡಬಿದ್ರೆ ಉಪಗ್ರಹ ಶಾಖೆ ಯಲ್ಲಿ ಶಾಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿಯಾಗಿದ್ದ ವಿ. ಎಸ್. ಕುಮಾರ್ ಉಡುಪಿಗೆ ವರ್ಗಾವಣೆ ಗೊಂಡಿದ್ದು ತೆರವಾದ ಸ್ಥಾನಕ್ಕೆ ಅಧಿಕಾರ ವಹಿಸಿಕೊಂಡರು.