ಬೆಳ್ತಂಗಡಿ : ಉತ್ತಮ ನಾಯಕತ್ವ, ಉತ್ತಮ ಪ್ರಜೆಗಳಿಗಾಗಿ ತರಬೇತಿ ಶಿಬಿರ ಧರ್ಮಪ್ರಾಂತ್ಯದ ಪಾಲನಾ ಕೇಂದ್ರದಲ್ಲಿ ಮೂರು ದಿನಗಳ ಪ್ರೌಢ ಶಾಲಾ ಮಕ್ಕಳಿಗಾಗಿ ಶಿಬಿರ ಮೇ.15ರಂದು ಆರಂಭಗೊಂಡಿದೆ.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ಧರ್ಮಪ್ರಾಂತ್ಯದ ಚಾನ್ಸ್ಲರ್ ಫಾ. ಲಾರೆನ್ಸ್ ಪೋನೋಲಿಲ್ ರವರು, “ಸಮಾಜದಲ್ಲಿ ಉತ್ತಮ ನಾಯಕತ್ವ ಗುಣಗಳು ಇರುವವರು ಸಾಮಾಜ ಸೇವೆಗೆ ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ನಡೆಸಲಾಗುವ ಈ ಶಿಬಿರವು ಸಮಾಜಕ್ಕೆ ಒಳಿತಾಗಲಿ” ಎಂದು ಹಾರೈಸಿದರು. ಕೇರಳದ ಪರಿಣಿತ ತಂಡವು ಶಿಬಿರವನ್ನು ನಡೆಸಲಿದ್ದಾರೆ.