ಬೆಳ್ತಂಗಡಿ: ಬೆಂಗಳೂರಿನ ಹೃದಯ ಭಾಗ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದ ಭವ್ಯ ರಂಗಸ್ಥಳದಲ್ಲಿ ಮೇ 12 ಮತ್ತು 13ರಂದು ಕರಾವಳಿ ಕರ್ನಾಟಕದ ಆದಿ ಧೂಮಾವತಿ ಕೋಟಿ ಚೆನ್ನಯ ದೇಯಿ ಬೈದೇತಿ ಮೂಲಸ್ಥಾನ ಕೃಪಾಪೋಷಿತ ಯಕ್ಷಗಾನ ನಾಟಕ ಮಂಡಳಿಯಿಂದ ಮೇ. 12ರಂದು ಶ್ರೀದೇವಿ ಮಹಾತ್ಮೆ 13 ರಂದು ಬೆಂಗಳೂರಿನ ಕಾಡಮಲ್ಲೇಶ್ವರದಲ್ಲಿ ಭವ್ಯ ರಂಗಸ್ಥಳದಲ್ಲಿ ಶ್ರೀ ಗೆಜ್ಜೆ ಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.
ಕಾಡು ಮಲ್ಲೇಶ್ವರದ ಅಧ್ಯಕ್ಷ ಬಿ.ಕೆ.ಶಿವರಾಂರವರ ಸಹಕಾರದಿಂದ, ಬೆಂಗಳೂರಿನ ಸಮಾಜದ ಧುರೀಣರು, ಯುವ ಉದ್ಯಮಿ ಉದಯ ಚಂದ್ರ ಡಿ. ಸುವರ್ಣ ರಮೇಶ್ ಬಂಗೇರ ಮಾಣಿಂಜ, ಲಕ್ಷ್ಮಣ್ ಕೆ. ಅಮೀನ್ ಪ್ರಾಯೋಜಕತ್ವದಲ್ಲಿ ಅಭೂತಪೂರ್ವವಾದ ಮನೋರಂಜನೇಯ ಯಕ್ಷಗಾನ ನಡೆದಿದ್ದು, ವರುಣ ದೇವರ ಕೃಪೆಯಿಂದ ಕಾರ್ಯಕ್ರಮ ಸುಸೂತ್ರವಾಗಿ ಯಾವುದೇ ಅಡಚಣೆ ಇಲ್ಲದೆ ನಡೆದಿತ್ತು. ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ಯುವ ನಾಯಕ ರಕ್ಷಿತ್ ಶಿವರಾಮ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೂಕ್ತ ಮಾರ್ಗದರ್ಶನ ನೀಡಿದರು. ಪ್ರಪ್ರಥಮವಾಗಿ 2022ರಲ್ಲಿ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಪೀತಾಂಬರ ಹೇರಾಜೇಯವರ
ಅಧ್ಯಕ್ಷತೆಯಲ್ಲಿ ಯಕ್ಷಗಾನ ಮೇಳ ಪ್ರಾರಂಭ ಆದಾಗ ಬೆಳ್ತಂಗಡಿ ತಾಲೂಕಿನಲ್ಲಿ ಸುಮಾರು ಐದು ಕಡೆ ರಕ್ಷಿತ್ ಶಿವರಾಂರವರ ನೇತೃತ್ವದಲ್ಲಿ ಯಕ್ಷಕೂಟ ಪ್ರಾರಂಭವಾಗಿ ಯಕ್ಷಗಾನಗಳು ನಡೆದದ್ದನ್ನು ನೆನಪಿಸಬಹುದು.