ಬೆಳ್ತಂಗಡಿ: ಜೆಸಿ ಭವನ ಮಂಜುಶ್ರೀಯಲ್ಲಿ ಜೆಸಿಐ ಬೆಳ್ತಂಗಡಿಯ ಉದ್ದೇಶಿತ ಯೋಜನೆ ‘ಜೇಸಿ ಛೇಂಬರ್ ಆಫ್ ಕಾಮರ್ಸ್’ ಸ್ಥಾಪನೆಯ ಬಗ್ಗೆ ಮಾಹಿತಿ ಕಾರ್ಯಗಾರ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮ ಮೇ.12ರಂದು ನಡೆಯಿತು.
ಜೆಸಿಐ ಬೆಳ್ತಂಗಡಿಯ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸರ್ವರಿಗೂ ಸ್ವಾಗತಿಸಿದರು. ಜೆಸಿಐ ವಲಯ 15 ರ ಜೆಕಾಂ ಚೇರ್ಮನ್ ಮಂಗಳೂರಿನ ರೆಸ್ಟೋರೆಂಟ್ ಉದ್ಯಮಿ ಜೇಸಿ ಧೀರಾಜ್ ಬಿ. ಉದ್ಯಾವರ್, ಜೆಕಾಂ ವಲಯ ಸಂಯೋಜಕ ಅಭಿಜಿತ್ ನಾಯ್ಕ್ ಹಾಗೂ ಜೆಕಾಂ ಕೊಚ್ ಅರುಣ್ ಪೀಟರ್ ಪಿಂಟೊ ಕಾರ್ಯಾಗಾರ ನಡೆಸಿಕೊಟ್ಟು ಇದೊಂದು ಜೇಸಿ ಹಾಗೂ ಜೇಸಿಯೇತರ ಉದ್ಯಮಿಗಳು, ವರ್ತಕರು, ವೈದ್ಯರು, ವಕೀಲರು ಲೆಕ್ಕ ಪರಿಶೋಧಕರು ಮುಂತಾದ ವ್ಯವಹಾರಸ್ಥರ ಕೊಂಡಿಯಾಗಿ ಕೆಲಸ ಮಾಡುತ್ತಿದ್ದು ರಾಷ್ಟ್ರೀಯ, ಅಂತರಾಷ್ಟ್ರೀಯ ಜಾಲವಾಗಿದೆ. ಮತ್ತು ಜೆಕಾಂ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಈ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಜೆಸಿಐ ಬೆಳ್ತಂಗಡಿಯ ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಬೆಳ್ತಂಗಡಿಯಲ್ಲಿ ಜೆಕಾಂ ಘಟಕವನ್ನು ಸ್ಥಾಪಿಸುವ ಬಗ್ಗೆ ಇಚ್ಛೆ ಹೊಂದಿದ್ದು ಶೀಘ್ರವೇ ಉದ್ಘಾಟಿಸಿಸುವ ಬಗ್ಗೆ ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷರಾದ ತುಕಾರಾಮ್ ಬಿ., ಚಿದಾನಂದ ಇಡ್ಯಾ, ವಸಂತ ಶೆಟ್ಟಿ ಶ್ರದ್ಧಾ, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ್ ಲಾೖಲ, ಅಭಿನಂದನ್ ಹರೀಶ್ ಹಾಗೂ ಜೆಸಿಐ ಬೆಳ್ತಂಗಡಿಯ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಜೇಸಿ ಪ್ರಶಾಂತ್ ಲಾೖಲ ಇವರು ವೇದಿಕೆ ಆಹ್ವಾನಿಸಿದರು. ಜೆಸಿ ಹೇಮಾವತಿ ಕೆ. ಸಂಪನ್ಮೂಲಗಳ ವ್ಯಕ್ತಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಜೇಸಿ ಪ್ರಮೋದ್ ಕೆ. ಧನ್ಯವಾದ ಸಲ್ಲಿಸಿದರು.