ಬೆಳ್ತಂಗಡಿ: ಮುಳಿಯ ಜುವೆಲ್ಸ್ ಇನ್ನು ಮುಂದೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಆಗಿ ಮತ್ತಷ್ಟು ಹೊಸತನದೊಂದಿಗೆ ಮೇ 17 ರಂದು ಉದ್ಘಾಟನೆಗೊಳ್ಳಲಿದೆ ಎಂದು ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ತಿಳಿಸಿದರು.
ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಮೇ. 13 ರಂದು ಬೆಳ್ತಂಗಡಿ ಮುಳಿಯ ಆಭರಣ ಮಳಿಗೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅವರು, ಮುಳಿಯಕ್ಕೆ ಸರಿಯಾದ ವ್ಯಕ್ತಿತ್ವ ಇರುವ ಪ್ರತಿಯೊಬ್ಬರ ಮೆಚ್ಚಿನ ನಟ ಮುಳಿಯದ ಬ್ರಾಂಡ್ ಅಂಬಾಸಿಡರ್ ಶೋ ರೂಂ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಉದ್ಘಾಟನೆ ದಿನ ಬರುವಂತಹ ಗ್ರಾಹಕರಿಗೆ ನಿರೀಕ್ಷೆಗೂ ಮೀರಿದ ಅಚ್ಚರಿ ಇರಲಿದೆ ಎಂದು ಕುತೂಹಲ ಸೃಷ್ಟಿಸಿರುವ ಕೃಷ್ಣ ನಾರಾಯಣರು, ಗ್ರಾಹಕರಿಗೆ ಯಾವಾಗಲೂ ಹೊಸತನ ನೀಡುವುದು ಮುಳಿಯ ವಿಶೇಷ, ಈ ಹೊಸ ಶೋರೂಮ್ ನಂಬಿಕೆ ಮತ್ತು ಪರಂಪರೆಯ ಜೊತೆಗೆ ಈ ವಿಶಾಲ ವಿಸ್ತ್ರತ ಶೋರೂಮ್ ಮೂಲಕ ಬೆಳ್ತಂಗಡಿ ಊರಿನ ಜನತೆಗೆ ಅರ್ಪಿಸುತ್ತಿದ್ದೇವೆ ಎನ್ನುತ್ತಾರೆ.
5000+sqft ನ ಬೆಳ್ತಂಗಡಿಯ ಅತಿ ದೊಡ್ಡ ಶೋರೂಂ: ಮುಳಿಯ ಗೋಲ್ಡ್ ಅಂಡ್ ಡೈಮಂಡ್, 81+ ವರ್ಷ ಪರಂಪರೆಯ ಚಿನ್ನದ ಮಳಿಗೆ ಇದೆ ಮೇ. 17ರಂದು ಹೊಸ ವಿಸ್ಮೃತ ಶೋರೂಮ್ ನೊಂದಿಗೆ ಮುಳಿಯ ಗೋಲ್ಡನ್ ಡ್ರೈಮಂಡ್ ಎಂದು ಹೊಸ ಹೆಸರಿನಿಂದ ಮತ್ತು ಹಲವು ಹೊಸತನಗಳಿಂದ ಉದ್ಘಾಟನೆಗೊಳ್ಳಲಿದೆ. ಎಂಟು ದಶಕಗಳ ಹಿಂದೆ ದಿವಂಗತ ಕೇಶವ ಭಟ್ಟರಿಂದ ಆರಂಭದ ಸಂಸ್ಥೆಯನ್ನು ಅವರ ಮೊಮ್ಮಕ್ಕಳದ ಕೇಶವ ಪ್ರಸಾದ್ ಹಾಗೂ ಕೃಷ್ಣನಾರಾಯಣ ಮುಳಿಯ ಇವರು ಮುನ್ನಡೆಸುತ್ತಿದ್ದಾರೆ.
ಕಳೆದ ಮೂರು ತಲೆಮಾರುಗಳಿಂದ ಗ್ರಾಹಕರ ಮತ್ತು ಜನತೆಯ ವಿಶ್ವಾಸ ಗಳಿಸಿ ಬೆಳೆಯುತ್ತಿರುವ ಮುಳಿಯ ಜನರಿಗೆ ಚಿನ್ನದೊಂದಿಗೆ ಸಂತೃಪ್ತಿ, ಸಂತೋಷ ನೀಡಿದೆ. ಈ 2 ಅಂತಸ್ತಿನ ವಿಶಾಲ ಶೋರೂಮ್ ಅತ್ಯಾಧುನಿಕ ಶೈಲಿಯಲ್ಲಿ ರೂಪಗೊಂಡಿದೆ. ಇಲ್ಲಿ ಚಿನ್ನ, ಬೆಳ್ಳಿ, ವಜ್ರ, ವಾಚುಗಳು, ಗಿಫ್ಟ್ ಐಟಂ..ಹಾಗೂ ವಿವಿಧ ಬಗೆಯ ಚಿನ್ನಾಭರಣಗಳ ಕೌಂಟರ್ ಗಳು ಇರಲಿವೆ. ಗ್ರಾಹಕರ ಸಂತೃಪ್ತಿ ಮತ್ತು ಸಂತೋಷ ನೀಡುತ್ತಾ ಮುಳಿಯ ಈಗ ಹಿಂದಿಗಿಂತ ದುಪ್ಪಟ್ಟು ರೀತಿಯಲ್ಲಿ ಸದಾ ಸಂತೋಷ ನೀಡುವಲ್ಲಿ ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲಿದೆ.
ಶೋರೂಮ್ ವಿಶೇಷಗಳು: 5000+ sqft ವಿಶಾಲ- 2 ಮಹಡಿ, ವಿಶಾಲ ಪಾರ್ಕಿಂಗ್, ಬೆಳ್ಳಿಯ ಆಭರಣಗಳ ವಿಶೇಷ ಕೌಂಟರ್, ಗ್ರಾಹಕರಿಗೆ ತಿಂಡಿ ಊಟದ ವ್ಯವಸ್ಥೆ, ಮಕ್ಕಳ ಆಟಕ್ಕೆ ಮತ್ತು ಆರೈಕೆಗೆ ವಿಶೇಷ ಕೊಠಡಿ, ವ್ಯಾಲೆಟ್ ಪಾರ್ಕಿಂಗ್, ವಾಚ್ ಕೌಂಟರ್, ವಜ್ರಾಭರಣ ಆಮೂಲ್ಯ ಕೌಂಟರ್, ದೇಶದಲಿಯೇ ಪ್ರಪ್ರಥಮ ಬಾರಿ ಎನ್ನಬಹುದಾದ ಗ್ರಾಹಕರ ಸಮ್ಮುಖದಲ್ಲಿ ಗೋಲ್ಡ್, ಪೂರಿಟಿ ಅನಲೈಸರ್ ಹಾಗೂ ಲ್ಯಾಬ್ ಗೋನ್ ಡೈಮಂಡ್ ಡಿಟೆಕ್ಟರ್ ಟೆಸ್ಟಿಂಗ್ ಮಿಷನ್ ಇದಲ್ಲದೆ ಬಳೆ, ಆಂಟಿಕ್, ನೆಕ್ಲೆಸ್, ಪಾರಂಪರಿಕ ಆಭರಣಗಳ ಕೌಂಟರ್ ಗಳು.
ಬೆಳ್ತಂಗಡಿಯ ವಿವಿಧಗ್ರಾಮಗಳಿಂದ ಬರುವಂತಹ ಗ್ರಾಹಕರಿಗೆ ಮದುವೆ ಮತ್ತು ಮನೆಯ ಸಮಾರಂಭಗಳ ಸಂದರ್ಭದಲ್ಲಿ ಬೇಕಾಗಿವಂತಹ ಹೆಚ್ಚಿನ ಆಯ್ಕೆ ಇಲ್ಲಿದೆ. ಸಾಮಾಜಿಕ ಜವಾಬ್ದಾರಿಯೊಂದಿಗೆ ಗ್ರಾಹಕ ಸಂತೃಪ್ತಿ ಮತ್ತು ನಮ್ಮ ಸುತ್ತ ಸದಾ ಸಂತೋಷವನ್ನು ನೀಡುವ ಮುಳಿಯ 150 ಕಂಪನಿಯಾಗಿದೆ. ಸುಮಾರು 500ಕ್ಕೂ ಹೆಚ್ಚಿನ ಸಿಬ್ಬಂದಿಗಳನ್ನು ಒಳಗೆ ಒಳಗೊಂಡಿರುವ ಮುಳಿಯ 1000 ಕ್ಕಿಂತಲೂ ಹೆಚ್ಚಿನ ಕುಟುಂಬಗಳಿಗೆ ಇಂಡೈರೆಕ್ಟ್ ಆಗಿ ಉದ್ಯೋಗ Applicable ಶುದ್ಧ ಹಾಲ್ ಮಾರ್ಕ್ 916 ಹಾಗೂ HUD ಚಿನ್ನದ ಆಭರಣಗಳನ್ನು ಮತ್ತು ಐಜಿಐ ಸರ್ಟಿಫೈಡ್ ವಜ್ರಭರಣಗಳನ್ನು ಮಾತ್ರ ಮಾರಾಟ ಮಾಡುತ್ತದೆ.
ಆರು ವರ್ಷಗಳ ಹಿಂದೆ 81 ಗ್ರಾಮ ದೇಗುಲಗಳಿಂದ ಬೆಳಕನ್ನು ತಂದು ತಂದು ಬೆಳ್ತಂಗಡಿ ಶೋರೂಮ್ ಅನ್ನು ಉದ್ಘಾಟನೆ ಮಾಡಲಾಗಿತ್ತು. ಈ ಬಾರಿಯೂ ಅದೇ ರೀತಿ ದೀಪ ಬೆಳಗಿಸಿ ಉದ್ಘಾಟಿಸುವ ಕಾರ್ಯಕ್ರಮ ನಡೆಯಲಿದೆ.