ಕೊಕ್ಕಡ: ಮೈಪಾಲ ಸೇತುವೆ ಸಹಿತ ಅಣೆಕಟ್ಟು ರೂ. 72ಕೋಟಿ ಕಾಮಗಾರಿಗೆ, ಆರಂಭದಲ್ಲಿ ಸೌತಡ್ಕ ಮಹಾಗಣಪತಿ ಸನ್ನಿಧಿಯಲ್ಲಿ ಗ್ರಾಮಸ್ಥರ ಸಂಕಲ್ಪದಂತೆ ಮೇ. 4ರಂದು ಶಾಸಕ ಹರೀಶ್ ಪೂಂಜರವರ ಉಪಸ್ಥಿತಿಯಲ್ಲಿ 120 ಅಗೇಲು ರಂಗಪೂಜೆಯು ನೆರವೇರಿತು.
ಶಾಸಕರ ಪತ್ನಿ ಸುಕೃತ ಹಾಗೂ ಮನೆಯವರು, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪುವಾಜೆ, ಕೊಕ್ಕಡ ಪಂಚಾಯತ್ ನಿಕಟ ಪೂರ್ವಧ್ಯಕ್ಷ ಯೋಗೀಶ್ ಅಲಂಬಿಲ, ಕೊಕ್ಕಡ ಪಂಚಾಯತ್ ಉಪಾಧ್ಯಕ್ಷ ಪ್ರಭಾಕರ್ ಗೌಡ, ಎಸ್.ಟಿ. ಮೋರ್ಚಾ ತಾಲೂಕು ಅಧ್ಯಕ್ಷ ರಾಜೇಶ್ ಕಳೆಂಜ, ಪ್ರಧಾನ ಕಾರ್ಯದರ್ಶಿ ವಿಠಲ್ ಕುರ್ಲೆ, ಕೊಕ್ಕಡ ಶಕ್ತಿ ಕೇಂದ್ರ ಪ್ರಮುಖ ಪ್ರಶಾತ್ ಪುವಾಜೆ, ಮೈಪಾಲ ಸೇತುವೆ ಕಾಂಟ್ರಾಕ್ಟರ್ ಪರವಾಗಿ ರತ್ನಾಕರ್ ಶೆಟ್ಟಿ, ಇಂಜಿನಿಯಾರ್ ಶಿವ ಪ್ರಸನ್ನ, ಸೌತಡ್ಕ ಬೂತ್ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ, ಫ್ಯಾಕ್ಸ್ ನಿರ್ದೇಶಕಿ ಅಶ್ವಿನಿ ರವಿ ನಾಯ್ಕ್, ರವಿ ಪುಡಿಕೇತ್ತುರು, ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹರೀಶ್ ಕೊಯಿಲ, ಕಾರ್ಯದರ್ಶಿ ಗಣೇಶ್ ಹೊಸ್ತೋಟ, ಶಾಸಕರ ಆಪ್ತ ಸಹಾಯಕ ವಿನೋದ್ ರಾಜ್, ಬಾಲಕೃಷ್ಣ ನೈಮಿಷ ಉಪಸ್ಥಿತರಿದ್ದರು.