
ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿಗೆ ಅಹರ್ನಿಶಿ 21 ವರ್ಷಗಳ ಕಾಲ ಶ್ರಮಿಸಿದ ಸಂಸ್ಥೆಯ ಪ್ರಾಂಶುಪಾಲ ಯದುಪತಿ ಗೌಡರಿಗೆ ಪ್ರಗತಿ ಸ್ವಸಹಾಯ ಸಂಘ ಮತ್ತು ಸ್ಪಂದನಾ ಸೇವಾ ಸಂಘದ ವತಿಯಿಂದ ಆತ್ಮೀಯವಾಗಿ ಗೌರವಿಸಿ, ನಿವೃತ್ತಿ ಜೀವನಕ್ಕೆ ಶುಭಾಶಯ ಕೋರಿದರು.
ಪ್ರಗತಿ ಸ್ವಸಹಾಯ ಸಂಘದ ಅಧ್ಯಕ್ಷರಾದ ಮೋಹನ ಗೌಡ ಕೊಯ್ಯೂರು, ಕಾರ್ಯದರ್ಶಿ ಮೀನಾಕ್ಷಿ ಮಹಾಬಲಗೌಡ, ಸ್ಪಂದನಾ ಸೇವಾ ಸಂಘದ ಸಂಚಾಲಕರಾದ ಸೀತಾರಾಮ್ ಬೆಳಾಲು, ಸುರೇಶ್ ಕೌಡಂಗೆ, ನಿತಿನ್ ಕಲ್ಮಂಜ, ಧನಂಜಯ್ ಕುಮಾರ್ ಶಿಬಾಜೆ, ಸದಸ್ಯರುಗಳಾದ ಮಹಾಬಲ ಗೌಡ, ಲಕ್ಷ್ಮೀನಾರಾಯಣ ಗೌಡ, ಬೆಳಿಯಪ್ಪ ಗೌಡ, ದಿನೇಶ್ ಗೌಡ, ಪ್ರೀತಮ್ ಸವಣಾಲು ಮೊದಲಾದವರು ಉಪಸ್ಥಿತರಿದ್ದರು.