ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿ ವಿವೇಕ್ ರವರ ಎನ್.ಡಿ.ಎ ಕ್ಲಿಯರ್

0

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿವೇಕ್ ಎಸ್. ಎಸ್. ನೇಷನಲ್ ಡಿಫೆನ್ಸ್ ಅಕಾಡೆಮಿ ನಡೆಸುವ ಎನ್. ಡಿ. ಎ ಲಿಖಿತ ಪರೀಕ್ಷೆಯಲ್ಲಿ – ಹತ್ತು ಲಕ್ಷ ವಿದ್ಯಾರ್ಥಿಗಳ ಪೈಕಿ ಅಂತಿಮ ಸುತ್ತಿಗೆ ಆಯ್ಕೆಯಾದ ದೇಶದ ಕೆಲವೇ ವಿದ್ಯಾರ್ಥಿಗಳ ಪೈಕಿ ವಿವೇಕ್ ಎಸ್. ಎಸ್. ಒಬ್ಬನಾಗಿದ್ದಾನೆ.

ಎಕ್ಸೆಲ್ ನಲ್ಲಿ , ರಾಷ್ಟ್ರ ಸೇವೆ ಮಾಡಲು ಮತ್ತು ರಾಷ್ಟ್ರ ಸೇನಾ ವಿಚಾರದಲ್ಲಿ ವಿಶೇಷ ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಈ ವರ್ಷದಿಂದ ಪ್ರತ್ಯೇಕ ಬ್ಯಾಚ್ ಮಾಡಿ, ಅತ್ಯುತ್ತಮ ತರಬೇತಿ ನೀಡಲಾಗುತ್ತಿದೆ. ವಿಕ್ರಾಂತ್ ಎಂಬ ಹೆಸರಿನ ಎನ್. ಡಿ. ಎ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ದೈಹಿಕ ತರಬೇತಿಯೊಂದಿಗೆ, ಎಸ್. ಎಸ್. ಬಿ ಸಂದರ್ಶನ ಎದುರಿಸುವ ಕುರಿತಾಗಿ ಕೂಡಾ ವಿಶೇಷ ತರಬೇತಿ ನೀಡಲಾಗುತ್ತಿದೆ.
ಸಾಧಕರನ್ನು ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ಸಂಯೋಜಕ ಜೋಸ್ಟಮ್ ಎ. ಟಿ. ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here