
ಕಳೆಂಜ: ಸ.ಉ.ಹಿ. ಪ್ರಾ. ಶಾಲೆ ಶಾಲೆತ್ತಡ್ಕ ದಲ್ಲಿ ಎ.27ರಂದು ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಶಾಖೆ ರೋಟರಿ ಕ್ಲಬ್ ಬೆಳ್ತಂಗಡಿ, ಕೆ. ವಿ. ಜಿ. ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ, ಜೆಸಿಐ ಕೊಕ್ಕಡ ಕಪಿಲಾ ಘಟಕ ಇದರ ಸಹಕಾರದಿಂದ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು.
ಶಿಬಿರದಲ್ಲಿ ಸುಮಾರು 100ಕ್ಕಿಂತಲೂ ಹೆಚ್ಚಿನ ಜನರು ಭಾಗವಹಿಸಿ ದಂತ ಚಿಕಿತ್ಸೆಗೆ ಸಂಭಂದ ಪಟ್ಟ ಚಿಕಿತ್ಸೆಗಳನ್ನು ಪಡೆದುಕೊಂಡರು. ಜೆಸಿಐ ಕೊಕ್ಕಡ ಕಪಿಲಾ ಘಟಕದ ಅಧ್ಯಕ್ಷೆ ಶೋಭಾ ಪಿ.,
ರೋಟರಿ ಕ್ಲಬ್ ಬೆಳ್ತಂಗಡಿ ಕಾರ್ಯದರ್ಶಿ ಸಂದೇಶ್ ಕುಮಾರ್,
ಬೆಳ್ತಂಗಡಿ ದುರ್ಗಾ ಕ್ಲಿನಿಕ್ ವೈದ್ಯ ರಾಘವೇಂದ್ರ ಪಧುಮಲೆ,
ಮುಖ್ಯೋಪಾಧ್ಯಾಯ ಹೆಚ್. ಎಸ್ ಶ್ರೀ ಕೃಷ್ಣ, ಪ್ರಭಾಕರ,
ಎಸ್. ಡಿ. ಎಮ್. ಸಿ ಅಧ್ಯಕ್ಷ ಪದ್ಮನಾಭ, ರಾಜೇಶ್, ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷ ಸಂತೋಷ್ ಜೈನ್, ಹಾಲು ಉತ್ಪಾದಕರ ಸಂಘ ಶಾಲೆತಡ್ಕ ಇದರ ಅಧ್ಯಕ್ಷ ಹರೀಶ್ ರಾವ್, ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಅಧ್ಯಕ್ಷ ಕೆ ಡಿ ಜೋಸೆಫ್ ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜ ಇದರ ಅಧ್ಯಕ್ಷ ಶ್ರೀಧರ್ ರಾವ್, ಎಸ್. ಕೆ.ಡಿ. ಆರ್. ಡಿ. ಪಿ ಕಳೆಂಜ ಸೇವಾ ಪ್ರತಿನಿಧಿ ಗೀತಾ, ಎಲ್.ಐ.ಸಿ ಇಂಡಿಯಾ ಬೆಳ್ತಂಗಡಿ ಶಾಖೆಯ ಉದಯಶಂಕರ್, ಕಳೆಂಜ ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಕುಂದರ್, ಕೆವಿಜಿ ದಂತ ವೈದ್ಯಕೀಯ ಕಾಲೇಜಿನ ವೈದ್ಯರು ಮತ್ತು ಸಿಬ್ಬಂದಿಗಳು ಆಸ್ಪತ್ರೆ ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಶಾಖೆಯವರು, ವಿದ್ಯಾರ್ಥಿಗಳು, ಜೆಸಿಐನ ಸದಸ್ಯರು, ದಂತ ಚಿಕಿತ್ಸೆ ಫಲಾನುಭವಿಗಳು ಉಪಸ್ಥಿತರಿದ್ದರು.