32ನೇ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

0

ನೇಲ್ಯಡ್ಕ: ಸೇವಾಭಾರತಿ, ಕನ್ಯಾಡಿ ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಶಿವಾನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಅರಸಿನಮಕ್ಕಿ ಇದರ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ಉಚಿತ 32ನೇ ಟೈಲರಿಂಗ್‌ ತರಬೇತಿ ಶಿಬಿರದ ಉದ್ಘಾಟನೆ ಏ. 27ರಂದು ನೇಲ್ಯಡ್ಕದಲ್ಲಿ ನಡೆಯಿತು.

ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಬೆಳ್ತಂಗಡಿ ಕೌಶಲ್ಯ ಎನ್.ಆರ್.ಎಲ್.ಎಮ್. (NRLM) ಮೇಲ್ವಿಚಾರಕಿ ವೀಣಾಶ್ರೀ ಕೆ. ಕೆ. ಚಾಲನೆ ನೀಡಿ, ಭಾಗವಹಿಸಿದ ಮಹಿಳೆಯರಿಗೆ ಶುಭಹಾರೈಸಿದರು. ಈ ತರಬೇತಿ ಶಿಬಿರವು ಸ್ವ-ಉದ್ಯೋಗದ ಕಡೆಗೆ ಮಹತ್ವದ ಹೆಜ್ಜೆಯಾಗಿದೆ ಎಂದರು.

ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷೆ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘದ ಸಿಇಒ ಸ್ವರ್ಣಗೌರಿ ಮಾತನಾಡಿ, ಟೈಲರಿಂಗ್ ಕಲಿಕೆ ಅನೇಕ ಉದ್ಯೋಗದ ಅವಕಾಶಗಳನ್ನು ಒದಗಿಸಬಲ್ಲದು. “ದೀಪ ಜ್ಯೋತಿ ಹೇಗೆ ಬೆಳಗುತ್ತದೋ, ಹಾಗೆಯೇ ನೀವು ಈ ವಿದ್ಯೆಯನ್ನು ಉಪಯೋಗಿಸಿ ಸಮಾಜದಲ್ಲಿ ಬೆಳಗಬೇಕು” ಎಂದು ಶುಭ ಹಾರೈಸಿದರು.

ಅರಸಿನಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಅರಸಿನಮಕ್ಕಿ ಶಿವಾನಿ ಸಂಜೀವಿನಿ ಮಹಿಳಾ ಒಕ್ಕೂಟ ಅಧ್ಯಕ್ಷೆ ಪ್ರತಿಮಾ, ನೇಲ್ಯಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ವಸಂತಿ ಕೆ., ಕನ್ಯಾಡಿ ಶ್ರೀ ದುರ್ಗಾ ಮಾತೃ ಮಂಡಳಿ ಖಜಾಂಚಿ ಬಬಿತಾ, ಟೈಲರಿಂಗ್ ತರಬೇತುದಾರ ಹರಿಣಾಕ್ಷಿ ಬಿ.ಪಿ., ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೇಲ್ಯಡ್ಕ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಭವಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ಒಟ್ಟು 27 ಮಂದಿ ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದು, ಮಹಿಳಾ ಸಬಲಿಕರಣದತ್ತ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಕೃಷಿ ಉದ್ಯೋಗ ಸಖಿ ಗೀತಾ, ಪಶು ಸಖಿ ವೇದಾವತಿ, ಸ್ಥಳೀಯ ಸಂಪನ್ಮೂಲ ವ್ಯಕ್ತಿ ಅಮಿತ ಪ್ರಾರ್ಥನೆಯನ್ನು ಮಾಡಿ, ಕಾರ್ಯಕ್ರಮದಲ್ಲಿ ಮುಖ್ಯ ಪುಸ್ತಕ ಬರಹಗಾರರು ನೀತಾ ಸ್ವಾಗತಿಸಿದರು. ಸೇವಾಭಾರತಿಯ ಡಾಕ್ಯುಮೆಂಟೇಶನ್, ಮೋನಿಟರಿಂಗ್ ಮತ್ತು ಕೋ – ಆರ್ಡಿನೇಟರ್ ಸುಮ ನಿರೂಪಿಸಿದರು. ಸ್ಥಳೀಯ ಸಂಪನ್ಮೂಲ ವ್ಯಕ್ತಿ ಹೇಮಲತಾ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here