ಬೆಳ್ತಂಗಡಿಯ ಶ್ರೀ ಗುರುದೇವ ವಿವಿಧೋದ್ಧೇಶ ಸಹಕಾರ ಸಂಘಕ್ಕೆ (ನಿ.) ರೂ. 4.84 ಕೋಟಿ ನಿವ್ವಳ ಲಾಭ

0

ಶ್ರೀ ಗುರುದೇವ ವಿವಿಧೋzಶ ಸಹಕಾರ ಸಂಘ (ನಿ.) ಬೆಳ್ತಂಗಡಿಯು ತನ್ನ ೨೫ ಶಾಖೆಗಳೊಂದಿಗೆ, ರೂ. 4.84 ಕೋಟಿ ನಿವ್ವಳ ಲಾಭಗಳಿಸಿದೆ. ರೂ. 1350 ಕೋಟಿಗೂ ಮಿಕ್ಕಿ ದಾಖಲೆ ವ್ಯವಹಾರಗಳನ್ನು ನಡೆಸಿದೆ. ಪ್ರಸ್ತುತ ರೂ. 242.62 ಕೋಟಿ ಠೇವಣಿಯನ್ನು ಸಂಗ್ರಹಿಸಿ, ಕಳೆದ ವರ್ಷಕ್ಕಿಂತ 28.5% ಪ್ರಗತಿಯನ್ನು ದಾಖಲಿಸಿರುತ್ತದೆ. ರೂ.204.32 ಕೋಟಿ ಸಾಲವನ್ನು ನೀಡಿ ಕಳೆದ ವರ್ಷಕ್ಕಿಂತ 31% ಪ್ರಗತಿಯನ್ನು ಹೊಂದಿರುತ್ತದೆ. ರೂ. 267.26 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಶೇ.98% ಸಾಲ ವಸೂಲಾತಿ ಮಾಡಿರುತ್ತದೆ. ತನ್ನ 25 ಶಾಖೆಗಳಲ್ಲಿ 3 ಶಾಖೆಗಳು ಹಾಗೂ ಕೇಂದ್ರಕಛೇರಿಯು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. 26ನೇ ಶಾಖೆಯು ಮೂಡಬಿದ್ರೆಯಲ್ಲಿ ಸ್ವಂತ ಕಟ್ಟಡವನ್ನು ಖರೀದಿಸಿ ಶೀಘ್ರವಾಗಿ ಗ್ರಾಹಕರ ಸೇವೆಗೆ ಲೋಕರ್ಪಣೆಗೊಳ್ಳಲಿದೆ, ಪ್ರತಿ ವರ್ಷ ಶೇ.15% ರಷ್ಟು ಲಾಭಾಂಶ ಸದಸ್ಯರಿಗೆ ನೀಡುತ್ತಾ ಬಂದಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಾಮಾಜಿಕ ಸೇವೆ, ಚಟುವಟಿಕೆ: ಸಂಸ್ಥೆಯು ಕೇವಲ ಬ್ಯಾಂಕಿಗ್ ಚಟುವಟಿಕೆಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಚಟುವಟಿಕೆಯಲ್ಲೂ ಸಕ್ರಿಯವಾಗಿದೆ. ‘ಕಲಿಕೆಗಾಗಿ ಸಹಾಯ ಸಹಾಯಕ್ಕಾಗಿ ಕಲಿಕೆ’ ಎನ್ನುವ ನಮ್ಮ ಸಂಸ್ಥೆಯ ಯೋಜನೆಯಡಿ ದತ್ತು ಸ್ವೀಕಾರ ಕಾರ್ಯಕ್ರಮದಡಿಯಲ್ಲಿ 3 ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೂರ್ಣ ಖರ್ಚು ವೆಚ್ಚ ಭರಿಸಲಾಗಿದ್ದು ಪ್ರಸ್ತುತ ಉತ್ತಮ ಉದ್ಯೋಗ ಲಭಿಸಿ ನೆಮ್ಮದಿಯ ಜೀವನವನ್ನು ನಡೆಸುತ್ತಿರುವುದು ಸಂಸ್ಥೆಯು ಕಂಡ ಕನಸು ನನಸಾಗಿದೆ. ಸಂಘದಿಂದ ಆರ್ಥಿಕ ನೆರವು ಪಡೆದುಕೊಮಡ ವೈಧ್ಯಾಕೀಯ ವಿದ್ಯಾರ್ಥಿನಿಯು ತನ್ನ ಎಂಬಿಬಿಎಸ್ ಪದವಿಯನ್ನು ಪೂರೈಸಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಶ್ರೀ ಗುರುದೇವ ಕಾಲೇಜಿನ ಪದವಿ ವ್ಯಾಸಂಗ ಮಾಡುತ್ತಿರುವ 111 ಪದವಿ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಪ್ರತಿ ವರ್ಷ 6 ರಿಂದ 7 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ.

ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿಯಲ್ಲಿ ಹಾಗೂ ಇತರ ಕ್ಷೇತ್ರದಲ್ಲಿ ಅತೀ ಹೆಚ್ಚು ಸಾಧನೆ ಮಾಡಿದ ಸಂಸ್ಥೆಯ ಸದಸ್ಯರ ಮಕ್ಕಳನ್ನು ಗುರುತಿಸಿ ಪ್ರತಿ ವರ್ಷ ಮಹಾಸಭೆಯಲ್ಲಿ ಸನ್ಮಾನಿಸಲಾಗಿರುತ್ತದೆ. ಅಲ್ಲದೆ ಎಲ್ಲಾ ನಿರ್ದೇಶಕರ ಸಭಾಭತ್ತೆಯನ್ನು ಪ್ರತಿವರ್ಷ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಲಾಗುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಭೀಕರ ನೆರೆ ಬಂದು ಪ್ರಾಕೃತಿಕ ದುರಂತ ಸಂಭವಿಸಿದಾಗ ಸಂಘದ ವತಿಯಿಂದ ರೂ.೩.೦೦ ಲಕ್ಷಕ್ಕೂ ಹೆಚ್ಚು ಪರಿಹಾರ ನಿಧಿ ನೀಡಲಾಗಿರುತ್ತದೆ. ಶಾಖೆಗಳ ದಶಮಾನೋತ್ಸವದ ಪ್ರಯುಕ್ತ ಹಲವು ಸಂಘಗಳ ಜಂಟಿ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಸಂಬಂಧಪಟ್ಟ ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕವನ್ನು ಸಂಘದ ವತಿಯಿಂದ ವಿತರಿಸಲಾಗಿರುತ್ತದೆ. ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ. ಈಗಾಗಲೇ ಸಂಘದಿಂದ ಆರ್ಥಿಕ ವೈದ್ಯಕೀಯ ವಿದ್ಯಾರ್ಥಿಯು ತನ್ನ ಎಮ್.ಬಿ.ಬಿ.ಎಸ್. ಪದವಿಯನ್ನು ಪೂರೈಸಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳ ಕನಸು ಸಂಘದ ಮುಂದಿದೆ.
ಸಂಘದ ಸಾಲಗಾರ ಸದಸ್ಯರು ಮರಣ ಹೊಂದಿದರೆ ಅಥವಾ ಶಾಶ್ವತ ಅಂಗವಿಕಲನಾದರೆ ಶ್ರೀಗುರು ಸಾಲಗಾರರ ಮರಣ ನಿಧಿಯಿಂದ ಗರಿಷ್ಠ ರೂ.5 ಲಕ್ಷದವರೆಗೆ ನೀಡಿ ಸಾಲಗಾರರ ಕುಟುಂಬವನ್ನು ಸಾಲದಿಂದ ಋಣಮುಕ್ತಗೊಳಿಸಲಾಗಿದೆ. ಸದ್ರಿ ಯೋಜನೆಯಿಂದ ಈವರೆಗೆ ಒಟ್ಟು 82 ಫಲಾನುಭವಿಗಳಿಗೆ ರೂ.61,21,372/- ಮರಣ ನಿಧಿಯಿಂದ ಸಾಲದ ಮೊತ್ತ ಭರಿಸಿ ಮೃತ ಸಾಲಗಾರರ ಕುಟುಂಬವನ್ನು ಸಂಪೂರ್ಣ ಸಾಲದಿಂದ ಋಣ ಮುಕ್ತಗೊಳಿಸಲಾಗಿರುತ್ತದೆ. ಅವಘಡದಿಂದ ಶಾಶ್ವತ ಅಂಗವಿಕಲರಾಗಿರುವ ಸಾಲಗಾರ ಸದಸ್ಯರಾದ ಶ್ರೀ ಅಕ್ಷತ್, ಶ್ರೀ ಶೀನಪ್ಪ ಗೌಡ, ಶ್ರೀ ಅನಿಲ್, ಶ್ರೀ ರಾಜೇಂದ್ರ ಮೂಲ್ಯ ರ ಸಾಲಗಳನ್ನು ಶ್ರೀ ಗುರು ಸಾಲಗಾರರ ಮರಣ ನಿಧಿಯಿಂದ ಭರಿಸಿ ಕಷ್ಟಕ್ಕೆ ಸ್ಪಂದಿಸಲಾಗಿದೆ.

ನೂತನ ಕೇಂದ್ರಕಛೇರಿಯು 11100 ಚದರ ಅಡಿ ವಿಸ್ತೀರ್ಣವುಳ್ಳ ೩ ಮಹಡಿಯ ಗುರುಸಾನಿಧ್ಯ ವಾಣಿಜ್ಯ ಸಂಕೀರ್ಣ ಹೊಂದಿದ್ದು. ಕೆಳ ಮಹಡಿ ಮತ್ತು ಪ್ರಥಮ ಮಹಡಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆ ನೆಲೆಯಲ್ಲಿ ನೀಡಲಾಗಿರುತ್ತದೆ. ಇದರಲ್ಲಿ ನೆಲ ಮಹಡಿಯಲ್ಲಿ ಸಂಘಕ್ಕೆ ಬರುವ ಗ್ರಾಹಕರಿಗೆ ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 2ನೇ ಮಹಡಿಯಲ್ಲಿ ಸುಸಜ್ಜಿತವಾದ ಆಡಳಿತ ಕಚೇರಿಯನ್ನು ಹೊಂದಿದ್ದು ಮತ್ತು 3ನೇ ಮಹಡಿಯು ಸುಮಾರು 300 ರಷ್ಟು ಸಂಖ್ಯೆಯ ಸಾಮಾರ್ಥ್ಯ ಹೊಂದಿರುವ ಶ್ರೀ ಗುರುಸಾನಿಧ್ಯ ಸಭಾಂಗಣವನ್ನು ಹೊಂದಿರುತ್ತದೆ. ಗ್ರಾಹಕರ ಅನುಕೂಲಕ್ಕಾಗಿ ಲಿಪ್ಟ್ ಸೌಲಭ್ಯ, 60 ಕಿಲೋವ್ಯಾಟ್ ಸಾಮಾರ್ಥ್ಯದ ಸೋಲಾರ್ ಅಳವಡಿಕೆ ಮಾಡಲಾಗಿರುತ್ತದೆ.

ಪ್ರಸ್ತುತ ಉಪಾದ್ಯಕ್ಷರಾಗಿ ಭಗೀರಥ ಜಿ, ನಿರ್ದೇಶಕರಾಗಿ ಶ್ರೀಮತಿ ಸುಜಿತಾ ವಿ ಬಂಗೇರ, ಶ್ರೀಮತಿ ತನುಜಾ ಶೇಖರ್, ಸಂಜೀವ ಪೂಜಾರಿ ಗುರುಕೃಪಾ, ಕೆ.ಪಿ.ದಿವಾಕರ, ಜಗದೀಶ್ಚಂz ಡಿ.ಕೆ, ಚಂದ್ರಶೇಖರ, ಧರಣೇಂದ್ರ ಕುಮಾರ್ ಪಿ, ಗಂಗಾಧರ ಮಿತ್ತಮಾರು, ಆನಂದ ಪೂಜಾರಿ ಸರ್ವೆದೋಳ, ಡಾ.ರಾಜಾರಾಮ ಕೆ.ಬಿ, ಜಯವಿಕ್ರಮ ಪಿ, ರಕ್ಷಿತ್ ಶಿವರಾಮ್, ಚಿದಾನಂದ ಪೂಜಾರಿ ಸಂಘದ ವಿಶೇಷಾಧಿಕಾರಿಗಳಾದ ಯಂ ಮೋನಪ್ಪ ಪೂಜಾರಿ ಕಂಡೆತ್ಯಾರು,ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿರುವ ಅಶ್ವತ್ಥ್ ಕುಮಾರ್‌ರವರು ಕರ್ತವ್ಯ ನಿರ್ವಹಿಸುತಿದ್ದಾರೆ ಎಂದು ಸಂಘದ ಸಿಇಒ ಅಶ್ವತ್ ಕುಮಾರ್ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here