
ಬೆಳ್ತಂಗಡಿ: ಟೈಲರ್ಸ್ ಅಸೋಸಿಯೇಷನ್ ವಲಯ ಸಮಿತಿ ಇದರ ವಾರ್ಷಿಕ ಮಹಾಸಭೆ ಹಾಗೂ ಟೈಲರ್ಸ್ ವೃತ್ತಿ ಭಾಂದವರ ಜೀವನಗಾಥೆ ಕುರಿತು ನಿರ್ಮಿಸಿದ ಎದೆ ತಟ್ಟಿ ಹೇಳುವೆ ನಾನೊಬ್ಬ ಟೈಲರ್ ಅನ್ನುವ ಕಿರುಚಿತ್ರ ಬಿಡುಗಡೆ ಸಮಾರಂಭ, ಐಡಿ ಕಾರ್ಡ್ ವಿತರಣೆಯು ಏ. 20ರಂದು ಬೆಳ್ತಂಗಡಿ ಜೇಸಿ ಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಲಯ ಸಮಿತಿ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಜಯಂತ್ ಉರ್ಲ್ಯಾಂಡಿ, ಜಿಲ್ಲಾ ಮಾಜಿ ಕಾರ್ಯದರ್ಶಿ ಈಶ್ವರ್ ಕುಲಾಲ್, ಜಿಲ್ಲಾ ಉಪಾಧ್ಯಕ್ಷರಾದ ಶಾಂಭವಿ ಪಿ.ಬಂಗೇರ, ಕುಶಾಲಪ್ಪ ಗೌಡ, ತಾಲೂಕು ಮಾಜಿ ಕಾರ್ಯದರ್ಶಿ ವಸಂತ ಕೋಟ್ಯಾನ್, ಕ್ಷೇತ್ರ ಸಮಿತಿ ಅಧ್ಯಕ್ಷ ವೇದಾವತಿ ಜನಾರ್ದನ್, ವಲಯ ಕಾರ್ಯದರ್ಶಿ ಶಶಿಕಲಾ, ವಲಯ ಕೋಶಾಧಿಕಾರಿ ಶಿವರಾಮ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾಜ ಸೇವಕರಾದ ಸುರೇಂದ್ರ ಕೋಟ್ಯಾನ್ ರವರ ನಿರ್ದೇಶನದಲ್ಲಿ ರಚಿಸಲಾದ ಟೈಲರ್ಸ್ ಕಿರುಚಿತ್ರವನ್ನು ಕ್ಷೇತ್ರ ಸಮಿತಿ ಅಧ್ಯಕ್ಷೆ ವೇದಾವತಿ ಜನಾರ್ದನ ಬಿಡುಗಡೆ ಮಾಡಿದರು. ಹಿನ್ನೆಲೆ ದ್ವನಿ ಸಂಗ್ರಹ ಮಾಡಿದ ಸಂದೀಪ್ ಕರ್ಕೇರ ರವರನ್ನು ಸನ್ಮಾನಿಸಲಾಯಿತು. ಈ ಚಿತ್ರಕ್ಕೆ ಕಥೆಯನ್ನು ಹರೀಶ್ ಜಿ.ವಿ.ಸವನಾಲು ರಚಿಸಿದ್ದಾರೆ.

ಟೈಲರ್ಸ್ ಸದಸ್ಯರ ಐಡಿ ಕಾರ್ಡ್ ವಿತರಿಸಲಾಯಿತು. ಸಂಘಟನೆ ಬಲಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ನೂತನ ಸಮಿತಿಯನ್ನು ರಚಿಸಲಾಯಿತು. ಸುರೇಂದ್ರ ಕೋಟ್ಯಾನ್ ಅಧ್ಯಕ್ಷರಾಗಿ ಪುನಾರಾಯ್ಕೆಯಾದರು.ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಜಿ.ವಿ.ಯವರನ್ನು ಅರಿಸಲಾಯಿತು. ಮಾಜಿ ಜಿಲ್ಲಾ ಕಾರ್ಯದರ್ಶಿ ನವೀನ್ ಟೈಲರ್ ರ್ಸ್ವಾಗತಿಸಿದರು. ಸದಾನಂದ ಸಾಲಿಯಾನ್ ಬಳಂಜ ಕಾರ್ಯಕ್ರಮ ನಿರೂಪಿಸಿದರು.