ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಪ್ರಾಯೋಜಕತ್ವದಲ್ಲಿ ಸಿಬಿಕೆ ಕಪ್-2025 ರಾಷ್ಟ್ರಮಟ್ಟದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ

0

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಇದರ ಪ್ರಾಯೋಜಕತ್ವದಲ್ಲಿ ಸಿಬಿಕೆ ಕಪ್-2025 ರಾಷ್ಟ್ರಮಟ್ಟದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಹಾಗೂ ರಾಷ್ಟ್ರಮಟ್ಟದ ಮುಕ್ತ ಹಗ್ಗ ಜಗ್ಗಾಟ ಪಂದ್ಯಾಟವು ಸ.ಹಿ.ಪ್ರಾ. ಶಾಲಾ ಮೈದಾನ ಕಾಯರ್ತಡ್ಕದಲ್ಲಿ ಎ.20ರಂದು ನಡೆಯಿತು. ಕಾರ್ಯಕ್ರಮವನ್ನು ಬೆಳ್ತಂಗಡಿ ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಅನಿಲ್ ಎ.ಜೆ ಉದ್ಘಾಟಿಸಿ ಶುಭಹಾರೈಸಿದರು. ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ಅಧ್ಯಕ್ಷ ಜೋಸೆಫ್‌ ಕೆ.ಡಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಳೆಂಜ ಗ್ರಾ.ಪಂ. ಉಪಾಧ್ಯಕ್ಷ ಮಂಜುನಾಥ ಹೆಚ್, ಕಳೆಂಜ ಸ.ಹಿ.ಪ್ರಾ ಶಾಲೆ ಮುಖ್ಯೋಪಾಧ್ಯಾಯರು ಕೃಷ್ಣಪ್ಪ, ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಎಂ.ಡಿ. ಜನಾರ್ದನ್, ಕಳೆಂಜ ಕ್ರಿಶ್ಚಿಯನ್ ಬ್ರದ‌ರ್ ಉಪಾಧ್ಯಕ್ಷ ಶಾಜಿ ತೋಮಸ್, ಕಳೆಂಜ ಕ್ರಿಶ್ಚಿಯನ್ ಬ್ರದ‌ರ್ ಕಾರ್ಯದರ್ಶಿ ತೋಮಸ್ ಪಿ.ಡಿ, ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ಕೋಶಾಧಿಕಾರಿ ಮಾಥ್ಯು ಕೆ.ಕೆ. ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಸೆಬಾಸ್ಟಿನ್‌ ಪಿ.ಟಿ ಸ್ವಾಗತಿಸಿದರು. ಸಿಜೋ ಜೋಸೆಫ್‌ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here