

ಕಕ್ಯಪದವು: ಏ. 15ರಂದು ವಿದ್ಯಾರ್ಥಿಗಳಿಗೆ ಸೈದ್ಧಾಂತಿಕ ಜ್ಞಾನದ ಜೊತೆಗೆ ಕೈಗಾರಿಕಾ ಕಾರ್ಯಗಳ ಅರಿವು ಮತ್ತು ಆಂತರಿಕ ಕೆಲಸದ ವಾತಾವರಣ ಪರಿಚಯಿಸುವ ನಿಟ್ಟಿನಲ್ಲಿ ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ನಡೆಸುತ್ತಿರುವ ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಡೆಕ್ಕನ್ ಪ್ಲಾಸ್ಟ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಪ್ಲ್ಯಾಸ್ಟಿಕ್ ಯಂತ್ರೋಪಕರಣಗಳ ತಯಾರಿಕಾ ಕಾರ್ಖಾನೆ ಮುಡಿಪು ಇಲ್ಲಿಗೆ ಭೇಟಿ ನೀಡಲಾಯಿತು. ಕಾರ್ಖಾನೆಗಳ ವಿವಿಧ ಭಾಗಗಳನ್ನು ಸಂದರ್ಶಿಸಿ ಕೆಲಸದ ಬಗ್ಗೆ ನೈಜ ಚಿತ್ರಣ ಪಡೆದು ಸಂಸ್ಥೆಯ ಮೇಲ್ವಿಚಾರಕ ಬಿ. ಹೆಚ್. ಅಸ್ಕರ್ ಅಲಿ ಇವರಿಂದ ಉಪಯುಕ್ತ ಮಾಹಿತಿಯನ್ನು ಪಡೆಯಲಾಯಿತು .
ಯಂತ್ರೋಪಕರಣಗಳ ಉತ್ಪಾದನಾ ಪ್ರಕ್ರಿಯೆ, ವೆಚ್ಚ, ಆದಾಯ ಹಾಗೂ ವಿವಿಧ ಯಂತ್ರೋಪಕರಣಗಳು, ಉತ್ಪಾದನೆಯನ್ನು ಮಾಡುವ ವಿಧಾನ ಮೊದಲಾದವುಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಲಾಯಿತು. ನಮ್ಮ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಜೋಸ್ಟನ್ ಲೋಬೊ ಅವರು ಕೈಗಾರಿಕಾ ಭೇಟಿಯೊಂದಿಗೆ ಜೊತೆಗಿದ್ದು ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿ ಕೈಗಾರಿಕಾ ಭೇಟಿಯನ್ನು ಯಶಸ್ವಿಗೊಳಿಸಿದರು. ಕಾಲೇಜು ವಿಭಾಗದ ಮುಖ್ಯಸ್ಥೆ ಸೌಮ್ಯ ಎನ್. ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಿಂದ್ಯಾಶ್ರೀ ಹಾಗೂ ವಿಭಾಗದ ಉಪನ್ಯಾಸಕರು ಸಹಕರಿಸಿದರು.