

ಬೆಳ್ತಂಗಡಿ: ಹೇರಾಜೆ ಕುಟುಂಬದ ವತಿಯಿಂದ ಎ. 11ರಂದು ಸತ್ಯನಾರಾಯಣ ಪೂಜೆ ಮತ್ತು ಕುಟುಂಬದ ಪರಿವಾರ ದೈವಗಳ ನರ್ತನ ಸೇವೆ ಹೇರಾಜೆ ಗುತ್ತು ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಾಜಿ ಸಚಿವ ಬಿ. ರಮನಾಥ್ ರೈ, ಚಿತ್ರನಟ ವಿಜಯ ರಾಘವೇಂದ್ರ, ಶಿವಪ್ರಸಾದ ಅಜಿಲ, ಮಾಜಿ ಶಾಸಕ ಪ್ರಭಾಕರ ಬಂಗೇರ ಹಾಗೂ ನೂರಾರು ಕುಟುಂಬದ ಸದಸ್ಯರು ಊರಿನ ಗಣ್ಯರು ರೋಟರಿ ಬಂಧುಗಳು ಹಾಜರಿದ್ದರು.

ಅವರನ್ನು ಕುಟುಂಬದ ಪೀತಾಂಬರ ಹೆರಾಜೆ, ಮಿತ್ರ ಹೆರಾಜೆ, ಜಯರಾಮ ಬಂಗೇರ, ರಕ್ಷಿತ್ ಶಿವರಾಮ್ ರವವರು ಸ್ವಾಗತಿಸಿ, ಗೌರವಿಸಿದರು.