

ಕಲ್ಮಂಜ: ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಧ್ವಜಸ್ತಂಭ ನಿರ್ಮಿಸಲು ಆರಿಸಿರುವ ಕಲ್ಲಿಗೆ ದೇವರ ತೀರ್ಥ ಹಾಗೂ ಗಂಧವನ್ನು ಹಾಕಿ ಮುಂದಿನ ಕೆಲಸಕ್ಕೆ ಚಾಲನೆ ನೀಡಲಾಯಿತು. ಧ್ವಜಸ್ತಂಭದ ದಾನಿಗಳಾದ ಮುಂಚಾನದ ಜಯರಾಮರಾವ್ ಮತ್ತು ಕುಟುಂಬಸ್ಥರು, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ತುಕಾರಾಮ ಸಾಲಿಯನ್, ಕೃಷ್ಣಪ್ಪ ಗುಡಿಗಾರ್, ಅರ್ಚಕ ರಾಜೇಶ್ ಹೊಳ್ಳ ಹಾಗೂ ಕಲ್ಲಿನ ಶಿಲ್ಪಿಯವರು ಉಪಸ್ಥಿತರಿದ್ದರು.