ಅಳದಂಗಡಿ ಗ್ರಾ. ಪಂ. ವ್ಯಾಪ್ತಿಯ ವಿಕಲಚೇತನರ ಸಮನ್ವಯ ಗ್ರಾಮ ಸಭೆ

0

ಬೆಳ್ತಂಗಡಿ: ಕಟ್ಟಕಡೇಯ ವಿಕಲಚೇತನರು ಕೂಡ ಸರಕಾರದ ಸೂಕ್ತ ಯೋಜನೆಗಳನ್ನು ಸಮರ್ಪಕವಾಗಿ ಸದುಪಯೋಗಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ವಿಕಲಚೇತನರ ತಾಲೂಕು ಸಂಯೋಜಕ ಜೋನ್ ಬ್ಯಾಪ್ಟಿಸ್ಟ್ ಡಿಸೋಜ ಹೇಳಿದರು.

ಮಾ. 28ರಂದು ಅಳದಂಗಡಿ ಗ್ರಾ. ಪಂ. ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ವಿಕಲಚೇತನರ ದಿನಾಚರಣೆಯ ಅಂಗವಾಗಿ ವಿಕಲಚೇತನರ ಸಮನ್ವಯ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ಅಳದಂಗಡಿ ಪಂಚಾಯತ್ ನ ಅಧ್ಯಕ್ಷೆ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಸಭೆಯ ಪ್ರಾಮುಖ್ಯತೆಯನ್ನು ಪ್ರಸ್ತಾವನೆಗೈದು ವಾರ್ಷಿಕ ವರದಿ ಮತ್ತು ಪಂಚಾಯತ್ ವ್ಯಾಪ್ತಿಯ ವಿಕಲಚೇತನರ ಸಮೀಕ್ಷೆಯನ್ನು ಪಂಚಾಯತ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಸಂಧ್ಯಾ ವಾಚಿಸಿದರು.

ವಿಕಲಚೇತನರ ಸಮನ್ವಯ ಗ್ರಾಮ ಸಭೆ ನಡೆಸಲು ಸರಕಾರ ಹೊರಡಿಸಿರುವ ಸುತ್ತೋಲೆ ಹಾಗೂ ಪ್ರಮುಖ್ಯತೆ, ವಿಕಲಚೇತನರಿಗೆ ಸರಕಾರದ ಕಲ್ಪಸಿಕೊಡುವ ಸಂಪೂರ್ಣ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ವಿಕಲಚೇತನರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಮಾರ್ಗದರ್ಶನ‌ ನೀಡಲಾಯಿತು. ಪಂಚಾಯತ್ ಸದಸ್ಯ ರವಿ ಪೂಜಾರಿ ಶುಭ ಹಾರೈಸಿದರು.

ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿ.ಎಚ್.ಓ ತೃಪ್ತಿ ಇವರು ವಿಕಲಚೇತರಿಗೆ ಮತ್ತು ಸಮೂದಾಯಕ್ಕೆ ಆರೋಗ್ಯದ ಬಗ್ಗೆ ಅಗತ್ಯ ಮಾಹಿತಿ ಹಾಗೂ ಮುನ್ನೆಚ್ಚರಿಕೆಗಳ ಬಗ್ಗೆ ಅಗತ್ಯ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಪಂಚಾಯತ್ ಶೇಕಡ 5ರ ಅನುದಾನ ಮತ್ತು 15ನೇ ಅಣಕಾಸಿನ ಶೇಕಡ 5ರ ಅನುದಾನದಿಂದ ಪಂಚಾಯತ್ ವ್ಯಾಪ್ತಿಯ ವಿಕಲಚೇತನರಿಗೆ ಕೈಗೊಂಡಿರುವ ಯೋಜನೆ ಹಾಗೂ ಕಾಮಗಾರಿಗಳ ಬಗ್ಗೆ ಮಾತನಾಡಿದರು.

ಗ್ರಾ.ಪಂ. ನ ಎಂ.ಬಿ.ಕೆ ಹರ್ಷಳ, ಪಂಚಾಯತ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಸಂಧ್ಯಾ ನಾಡಗೀತೆ ಹಾಡಿದರು. ಪಂಚಾಯತ್ ಕಾರ್ಯದರ್ಶಿ ಪೂವಪ್ಪ ಸ್ವಾಗತಿಸಿದರು. ಆಶಾ ಕಾರ್ಯಕರ್ತೆ ಶಾರದ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here