

ಶಿರ್ಲಾಲು: ಜೈ ಭೀಮ್ ಯುವ ಸೇನೆ ಕರಂಬಾರು -ಶಿರ್ಲಾಲು ಸಂಘಟನೆಯ ವತಿಯಿಂದ ಏ. 20ರಂದು ನಡೆಯಲ್ಲಿರುವ ವಿಶ್ವ ಜ್ಞಾನಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ 134ನೇ ವರ್ಷದ ಜನ್ಮದಿನಾಚರಣೆ ಮತ್ತು ದಲಿತ ಭಾಂದವರಿಗೆ ತಾಲೂಕು ಮಟ್ಟದ ಆಟೋಟ ಸ್ಪರ್ಧೆಗಳು ನಡೆಸುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಏ.10ರಂದು ಜೈಭೀಮ್ ಯುವ ಸೇನೆ ಸಮಿತಿಯ ಅಧ್ಯಕ್ಷ ಪ್ರವೀಣ್ ಮುಳಿಗುಡ್ಡೆ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯರಾದ ಬಾಬು ಎ. ದಲಿತ ಮುಖಂಡ ಅಣ್ಣು ಎಸ್., ಪುಚ್ಚೆದೊಟ್ಟುರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮವನ್ನು ಪುಷ್ಷರಾಜ್ ಎಂ. ಕೆ. ಸ್ವಾಗತಿಸಿ, ಸಮಿತಿಯ ಸಂಘಟನಾ ಸಂಚಾಲಕಿ ಪವಿತ್ರ ರವಿ ನಿರೂಪಿಸಿದರು. ಈ ಕಾರ್ಯ ಕ್ರಮದಲ್ಲಿ ದಲಿತ ಸಮಿತಿ ಪದಾಧಿಕಾರಿಗಳು ಉಪಸ್ಥಿತಿಯಿದ್ದರು. ಸಮಿತಿಯ ಉಪಾಧ್ಯಕ್ಷ ವೇಣುಗೋಪಾಲ ಧನ್ಯವಾದಗಳು ಸಲ್ಲಿಸಿದರು.