

ಬೆಳ್ತಂಗಡಿ: ಸಂಸ್ಕಾರ ಭಾರತಿ ಬೆಳ್ತಂಗಡಿ, ಹನುಮೋತ್ಸವ ಸಮಿತಿ ಅಳದಂಗಡಿ ವತಿಯಿಂದ ಎ. 12ರಂದು ಅಳದಂಗಡಿ ಶ್ರೀ ಸತ್ಯದೇವತಾ ಮೈದಾನದಲ್ಲಿ ಹನುಮೋತ್ಸವ 2025 ಹನುಮ ಸಹಸ್ರ ಕದಳಿ ಯಾಗ, ಲಂಕಾ ದಹನ ದೃಶ್ಯ ರೂಪಕ, ಭಜನೋತ್ಸವ ಸಾಮೂಹಿಕ ಹನುಮಾನ್ ಚಾಲೀಸ ಪಠಣ, ಮಹಾಭಿ ವಂದ್ಯ, ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಬೆಳ್ತಂಗಡಿ ಸಂಸ್ಕಾರ ಭಾರತಿ ಅಧ್ಯಕ್ಷ ಸಂಪತ್ ಬಿ. ಸುವರ್ಣ ಹೇಳಿದರು. ಅವರು ಎ. 9ರಂದು ಸುವರ್ಣ ಆರ್ಕೆಡ್ ನಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಹನುಮ ಜಯಂತಿಯ ಸಂದರ್ಭದಲ್ಲಿ ಸಾಮೂಹಿಕವಾಗಿ ಒಟ್ಟು ಸೇರಿ ಪ್ರಾರ್ಥಿಸುವ ನಿಟ್ಟಿನಲ್ಲಿ ಅಂದು ಬೆಳಿಗ್ಗೆಯಿಂದಲೇ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದ್ದು ಸಂಜೆ 3 ಗಂಟೆಯಿಂದ ಬ್ರಹ್ಮ ಶ್ರೀ ಮಡಂತ್ಯಾರು ವೇದಮೂರ್ತಿ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಹನುಮ ಮಹಾಯಾಗ ನಡೆದು ಸಂಜೆ 6ಕ್ಕೆ ಪೂರ್ಣಾವತಿ ನಡೆಯಲಿದೆ. ಈ ಪರಿಸರದ 32 ಗ್ರಾಮಗಳ ಮನೆಗಳ ಭಕ್ತರಿಂದ ಎಳ್ಳುಗಂಟು ಸಮರ್ಪಣೆ ನಡೆಯಲಿದ್ದು, ಹನುಮ ಶ್ರೀ ರಕ್ಷೆ ವಿತರಣೆ ಮಾಡಲಾಗುವುದು.
ಕುಣಿತ ಭಜನೋತ್ಸವ ಪ್ರಾರಂಭ ಗೊಂಡು ಸಂಜೆ 6ಕ್ಕೆ ಭಜನೆ ಮಂಗಳ ನಡೆಯಲಿದೆ. ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಭಾರತದ ನಾಗಸಾಧು ಸನ್ಯಾಸಿ ಪರಂಪರೆಯಲ್ಲಿ ಕರ್ನಾಟಕದ ಮೊದಲ ಮಹಾ ಮಂಡಲೇಶ್ವರರಾಗಿ ಪಟ್ಟಾಭಿಷಿಕ್ತ ರಾದ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಮಹಾಮಂಡಲೇ ಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾ ರಾಜ ಇವರಿಗೆ ಭಕ್ತಿ ಪೂರ್ವ ಕ ಗೌರವಾಭಿನಂದನೆ ಮಹಾಭಿವಂದ್ಯ ನಡೆಯಲಿದೆ.
ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸ ರಾದ ಡಾ. ಪದ್ಮಪ್ರಸಾದ್ ಅಜಿಲರು ದೀಪ ಪ್ರಜ್ವಲನೆ ಮೂಲಕ ಉದ್ಘಾಟನೆ ಮಾಡಲಿದ್ದಾರೆ ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಭಿನಂದನಾ ಭಾಷಣ ಮಾಡುವರು. ಸಂಸದ ಬ್ರೇಜೇಶ್ ಚೌಟ, ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಬರೋಡ ತುಳುಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಅಳದಂಗಡಿ ಶ್ರೀ ಸತ್ಯದೇವತೆ ದೇವಸ್ಥಾನದ ಆಡಳಿತ ಮೋಕ್ತೆಸರ ಶಿವಪ್ರಸಾದ್ ಅಜಿಲ, ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಬಳಿಕ ಲಂಕಾ ದಹನ ದೃಶ್ಯ ರೂಪಕ, ಆಕರ್ಷಕ ಸುಡು ಮದ್ದು ಪ್ರದರ್ಶನ, ರಾತ್ರಿ ಛತ್ರಪತಿ ಶಿವಾಜಿ ನಾಟಕ ನಡೆಯಲಿದೆ ಎಂದರು. ಸಮಿತಿಯ ಪ್ರಧಾನ ಸಂಚಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ ಮಾತನಾಡಿ ಹನುಮೋತ್ಸವ ಕಾರ್ಯಕ್ರಮದ ಯಶಸ್ವಿಗೆ ಸಮಿತಿ ರಚನೆ ಮಾಡಿ 38 ಗ್ರಾಮ ದ ಮನೆ ಭೇಟಿ ಮಾಡಿ ಎಳ್ಳು ಗಂಟು ಸೇವೆಯಲ್ಲಿ ಎಲ್ಲರೂ ಭಾಗವಹಿಸುವಂತೆ 3 ದಿನಗಳ ವೃತದೊಂದಿಗೆ ತಾವೇ ಎಳ್ಳು ಗಂಟು ಸಮರ್ಪಣೆಗೆ ಅವಕಾಶ ನೀಡಲಾಗುವುದು, ಸುಮಾರು ರೂ. 20 ಲಕ್ಷ ವೆಚ್ಚದಲ್ಲಿ ಅದ್ಧುರಿ ಕಾರ್ಯಕ್ರಮವಾಗಲಿದೆ ಎಂದರು.
ಸಮಿತಿ ಗೌರವ ಸಲಹೆಗಾರ ಶಶಿಧರ ಶೆಟ್ಟಿ ಅಳದಂಗಡಿ ಮಾತನಾಡಿ ಹನುಮೋತ್ಸವ ಹನುಮ ಜಯಂತಿಯಂದೇ ಮಾಡಲು ಚಿಂತಿಸಿ ಎಲ್ಲಾ ರೀತಿಯ ವಿಧಿ ವಿಧಾನಗಳ ಸಿದ್ಧತೆಯೊಂದಿಗೆ, ಊರಿನ ಗಣ್ಯರ ಸಹಕಾರ ದಿಂದ ನಡೆಯಲಿದ್ದು, ಮಹಿಳೆ ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಸುವರು ಎಂದರು. ಪತ್ರಿಕಾ ಗೋಷ್ಠಿಯಲ್ಲಿ, ಸಮಿತಿಯ ಪ್ರಧಾನ ಸಂಚಾಲಕ ವಿಜಯ ಗೌಡ ವೇಣೂರು, ನಿತ್ಯಾನಂದ ನಾವರ, ಗೌರವ ಸಲಹೆಗಾರ ಉಮೇಶ್ ಶಿರ್ಲಾಲು ಉಪಸ್ಥಿತರಿದ್ದರು.