

ನಾರಾವಿ: ಸಂತ ಅಂತೋನಿ ಪದವಿ ಪೂರ್ವ ಕಾಲೇಜು ನಾರಾವಿಯ ಒಟ್ಟು 103 ವಿದ್ಯಾರ್ಥಿಗಳಲ್ಲಿ 95 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ. 93 ಫಲಿತಾಂಶ ದಾಖಲಿಸಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು 61ರಲ್ಲಿ ಡಿಸ್ಟಿಂಕ್ಷನ್ 10, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು 42ರಲ್ಲಿ ಡಿಸ್ಟಿಂಕ್ಷನ್ 4, ಫಸ್ಟ್ ಕ್ಲಾಸ್ 68, ಸೆಕೆಂಡ್ ಕ್ಲಾಸ್ 13 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅನ್ವಿತ ಜೈನ್ 576 ಅಂಕ, ಜಿತೇಶ್ 573 ಅಂಕ, ವಿಜ್ಞಾನ ವಿಭಾಗದಲ್ಲಿ ತನುಷ್ 537 ಅಂಕ ಪಡೆದಿದ್ದಾರೆ.