

ಬೆಳ್ತಂಗಡಿ: ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶುರೆನ್ಸ್ ಕಂಪನಿಯ ವತಿಯಿಂದ ಮಂಗಳೂರಿನಲ್ಲಿ ನಡೆದ Value Award Ceremony ಕಾರ್ಯಕ್ರಮದಲ್ಲಿ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಕಾಶ್ ಸವಣಾಲು 1 ಸಿನೆಮಾ, 2 ಧಾರಾವಾಹಿ, 10 ಶಾರ್ಟ್ ಫಿಲ್ಮ್, 250 ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರು ಸವಣಾಲು ಗ್ರಾಮದ ಗುತ್ತಿನಬೈಲು ದಿ. ಅಣ್ಣಿ ಪೂಜಾರಿ ಮತ್ತು ಲಲಿತಾರವರ ಪುತ್ರ. ಪ್ರಸ್ತುತ ಲಾಯಿಲ ಸಿರಿ ಮಿಲ್ಲೆಟ್ ಕೆಫೆಯಲ್ಲಿ ಮುಖ್ಯ ಬಾಣಸಿಗನಾಗಿ ದುಡಿಯುತ್ತಿದ್ದಾರೆ.