

ಕುಪ್ಪೆಟ್ಟಿ: ವಾಹಾ ಅಕಾಡೆಮಿಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ವಿಧ್ಯಾಬ್ಯಾಸಕ್ಕೆ ಸೂಕ್ತವಾದ ಆಯ್ಕೆಗಳ ಬಗ್ಗೆ ಮಾಹಿತಿ ನೀಡುವ ಕೆರೆಯರ್ ಗೈಡನ್ಸ್ ಕಾರ್ಯಾಗಾರ ಕುಪ್ಪೆಟ್ಟಿಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಸಮಿತಿಯು ಕುಪ್ಪೆಟ್ಟಿಯ ವಾಹ ಅಕಾಡಮಿಯಲ್ಲಿ ಆಯೋಜಿಸಿದ್ದ ಈ ಕಾರ್ಯಗಾರದಲ್ಲಿ ಡಿವಿಷನ್ ವ್ಯಾಪ್ತಿಯ 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಿವಿಷನ್ ಉಪಾಧ್ಯಕ್ಷರಾದ ಅತಾವುಲ್ಲಾ ಹಿಮಮಿ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಹಮ್ಮದ್ ತೌಸೀಫ್ (ಅಸಿಸ್ಟೆಂಟ್ ಪ್ರೊಫೆಸರ್, ಸೈಂಟ್ ಅಲೋಷಿಯಸ್ ಕಾಲೇಜು ಮಂಗಳೂರು) ಭಾಗವಹಿಸಿದ್ದರು. ಇವರು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುವ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಬಳಿಕದ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳು ತಮ್ಮ ಸಂದೇಹಗಳನ್ನು ಕೇಳಿ ನಿವಾರಿಸಿಕೊಂಡರು.
ಕಾರ್ಯಕ್ರಮದಲ್ಲಿ ವಾಹ ಅಕಾಡಮಿ ಕುಪ್ಪೆಟ್ಟಿ ಇದರ ಮ್ಯಾನೇಜರ್ ನಝೀರ್ ಅಹ್ಸನಿ, ಡಿವಿಷನ್ ಸಮಿತಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು. ಡಿವಿಷನ್ ಪ್ರ. ಕಾರ್ಯದರ್ಶಿ ನಿಝಾನ್ ಪದ್ಮುಂಜ ಸ್ವಾಗತಿಸಿದರು. ಕ್ಯಾಪಸ್ ಕಾರ್ಯದರ್ಶಿ ಹನೀಫ್ ಕರ್ವೇಲು ಧನ್ಯವಾದ ಸಲ್ಲಿಸಿದರು.