ಬೆಳಾಲು ಶ್ರೀ ಧ.ಮಂ. ಪ್ರೌ. ಶಾಲೆಯ ವಿದ್ಯಾರ್ಥಿನಿಯರಿಗೆ ಬೈಸಿಕಲ್ ವಿತರಣೆ

0

ಬೆಳಾಲು: ಶ್ರೀ ಧ.ಮಂ. ಪ್ರೌಢ ಶಾಲೆಯ 10 ವಿದ್ಯಾರ್ಥಿನಿಯರಿಗೆ ರೋಟರಿ ಕ್ಲಬ್, ಯಲಹಂಕ, ಬೆಂಗಳೂರು ಇವರ ವತಿಯಿಂದ ಬೈಸಿಕಲ್ ವಿತರಣಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್, ಯಲಹಂಕ, ಬೆಂಗಳೂರು ಇದರ ಅಧ್ಯಕ್ಷರಾದ ಅಭಿಲೇಖ ಪಿ. ಮಂತ್ರಿ, ಕಾರ್ಯದರ್ಶಿ ಹರ್ಷ ವಸಿಷ್ಠ, ರೋಟರಿಕ್ಲಬ್ ನ ಚುನಾಯಿತ ಅಧ್ಯಕ್ಷ ಹಾಗೂ ಬೆಳಾಲು ಶಾಲೆಯ ಹಿರಿಯ ವಿದ್ಯಾರ್ಥಿಯಾದ ಅಶೋಕ್ ಹೆಬ್ಬಾರ್, ಬೈಸಿಕಲ್ ದಾನಿಗಳಾದ ವಿದ್ಯರಾಜ್ ಶೆಟ್ಟಿ ಬೈಸಿಕಲ್ ಗಳನ್ನು ವಿತರಿಸಿ,ಶುಭಹಾರೈಸಿದರು. ಈ ಸಂದರ್ಭದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಗಣೇಶ್ ಕನಿಕ್ಕಿಲ , ಅಧ್ಯಕ್ಷ ಶಶಿಧರ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಪ್ರಾಸ್ತಾವಿಕ ನುಡಿಗಳೊಂದಿಗೆ ಮುಖ್ಯೋಪಾಧ್ಯಾಯ ಜಯರಾಮ್ ಮಯ್ಯ ಸ್ವಾಗತಿಸಿದರು. ಶಿಕ್ಷಕ ಸುಮನ್ ಯು.ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here